ಬ್ರಿಟನ್ ನೂತನ ಪ್ರಧಾನಿಯಾಗಿ ಲಿಝ್ ಟ್ರೂಸ್ ಆಯ್ಕೆ

Update: 2022-09-05 12:59 GMT
ಲಿಝ್ ಟ್ರೂಸ್ (PTI)

ಲಂಡನ್, ಸೆ.2: ಬ್ರಿಟನ್ ನ ಪ್ರಧಾನಿ ಹುದ್ದೆಗೆ ಮಾಜಿ ಸಚಿವರಾದ ರಿಷಿ ಸುನಾಕ್(Rishi Sunak) ಮತ್ತು ಲಿಝ್ ಟ್ರೂಸ್(Liz Truss) ಮಧ್ಯೆ ಕಳೆದ ಕೆಲ ದಿನಗಳಿಂದ ನಡೆದ ತುರುಸಿನ ಪೈಪೋಟಿ ಅಂತ್ಯಗೊಂಡಿದ್ದು, ಲಿಝ್ ಟ್ರೂಸ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಮೂಲದ ರಿಷಿ ಸುನಕ್ ಅವರನ್ನು ಸುಮಾರು 21 ಸಾವಿರ ಮತಗಳ ಅಂತರದಿಂದ ಮಣಿಸಿ ಲಿಝ್ ಅವರು ಪ್ರಧಾನಿ ಹುದ್ದೆಗೇರಿದ್ದಾರೆ.

ಲಿಝ್ ಟ್ರೂಸ್ ಅವರು ಬ್ರಿಟನ್‌ನ ಮೂರನೇ ಮಹಿಳಾ ಪ್ರಧಾನಿಯಾಗಲಿದ್ದಾರೆ. ಅವರಿಗಿಂತ ಮೊದಲು, ಥೆರೆಸಾ ಮೇ ಮತ್ತು ಮಾರ್ಗರೇಟ್ ಥ್ಯಾಚರ್ ಬ್ರಿಟನ್‌ನ ಪ್ರಧಾನಿಯಾಗಿದ್ದರು.

ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾಗಿರುವ ಪ್ರಧಾನಿ ಹುದ್ದೆಗೆ ಕನ್ಸರ್ವೇಟಿವ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ಅಂತಿಮ ಹಂತದಲ್ಲಿ ದೇಶದಾದ್ಯಂತದ ಸುಮಾರು 2 ಲಕ್ಷ  ಕನ್ಸರ್ವೇಟಿವ್ ಪಕ್ಷದ ಸದಸ್ಯರು ಅಂಚೆಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು ಶುಕ್ರವಾರ ಸಂಜೆ 5 ಗಂಟೆಗೆ (ಬ್ರಿಟನ್ ಕಾಲಮಾನ) ಪ್ರಕ್ರಿಯೆ ಮುಕ್ತಾಯಗೊಂಡಿತ್ತು.

ಜುಲೈನಲ್ಲಿ, ಬೋರಿಸ್ ಜಾನ್ಸನ್ ಹಲವಾರು ವಿವಾದಗಳಲ್ಲಿ ಸಿಲುಕಿದ ನಂತರ ಕನ್ಸರ್ವೇಟಿವ್ ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News