ಚೀನಾದಲ್ಲಿ ಭೂಕಂಪ ೭ ಮಂದಿ ಮೃತ್ಯು, ವ್ಯಾಪಕ ಹಾನಿ

Update: 2022-09-05 17:11 GMT

ಬೀಜಿಂಗ್, ಸೆ.5: ಚೀನಾದ ಸಿಚುವಾನ್ ಪ್ರಾಂತದ ಲುಡಿಂಗ್ ಗ್ರಾಮದ ಪರ್ವತಪ್ರದೇಶದಲ್ಲಿ ಸೋಮವಾರ ಸಂಭವಿಸಿದ6.8 ತೀವ್ರತೆಯ ಭೂಕಂಪದಿಂದ 7 ಮಂದಿ ಮೃತಪಟ್ಟಿದ್ದು ಹಲವು ಮನೆ ಹಾಗೂ ಮೂಲಸೌಕರ್ಯಗಳಿಗೆ ಹಾನಿಯಾಗಿವೆ ಎಂದು ಚೀನಾದ ಭೂಕಂಪ ಜಾಲಗಳ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ.

ಹಲವೆಡೆ ಭೂಕುಸಿತ ಸಂಭವಿಸಿದ್ದು ಮನೆಗಳು ಹಾಗೂ ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಹಾನಿಯಾಗಿದೆ. ಭೂಕುಸಿತದಿಂದ ಗ್ರಾಮೀಣ ಹೆದ್ದಾರಿಯ ಮೇಲೆ ಕಲ್ಲು, ಮಣ್ಣಿನ ರಾಶಿ ಬಿದ್ದ ಕಾರಣ  ಸಂಚಾರಕ್ಕೆ ತಡೆಯಾಗಿದೆ ಎಂದು  ತುರ್ತು ನಿರ್ವಹಣೆ ಸಚಿವಾಲಯ ಹೇಳಿದೆ. ಭೂಕಂಪದಿಂದ ಆಗಿರುವ ನಾಶ-ನಷ್ಟದ ಕುರಿತ ವೀಡಿಯೊವನ್ನು ಸರಕಾರಿ ಸ್ವಾಮ್ಯದ ಸಿಸಿಟಿವಿ ಪ್ರಸಾರ ಮಾಡಿದೆ. ಭೂಕಂಪದ ಕಾರಣ ಲುಡಿಂಗ್ ಗ್ರಾಮದಿಂದ 200 ಕಿ.ಮೀ ದೂರದಲ್ಲಿರುವ ಪ್ರಾಂತೀಯ ರಾಜಧಾನಿ ಚೆಂಗ್ಡು ನಗರದಲ್ಲಿಯೂ ಭೂಮಿ ಕಂಪಿಸಿದಾಗ ಅಪಾರ್ಟ್ಮೆಂಟ್‌ನಲ್ಲಿದ್ದ ಜನರು ಗಾಭರಿಯಿಂದ ಹೊರಗೆ ಓಡಿ ಬಂದರು ಎಂದು ಮಾಧ್ಯಮಗಳು ವರದಿ ಮಾಡಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News