ಅಫ್ಘಾನ್‌ನಲ್ಲಿ ಭೂಕಂಪ 6 ಮಂದಿ ಮೃತ್ಯು

Update: 2022-09-05 17:15 GMT

ಕಾಬೂಲ್, ಸೆ.5: ಅಫ್ಘಾನ್‌ನ ಪೂರ್ವ ಭಾಗದಲ್ಲಿ ರವಿವಾರ ರಾತ್ರಿ ಸಂಭವಿಸಿದ 5.3 ತೀವ್ರತೆಯ ಭೂಕಂಪದಲ್ಲಿ ಕನಿಷ್ಟ 6 ಮಂದಿ ಮೃತಪಟ್ಟಿದ್ದು ಇತರ ೯ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಪೂರ್ವದಲ್ಲಿ ಪಾಕಿಸ್ತಾನದೊಂದಿಗಿನ ಗಡಿಪ್ರದೇಶದ ಬಳಿಯಿರುವ ಜಿಲ್ಲೆಗಳಲ್ಲಿ ಭೂಮಿ ಕಂಪಿಸಿದೆ. 3 ತಿಂಗಳ ಹಿಂದೆ ಇದೇ ಪ್ರದೇಶದಲ್ಲಿ ಸಂಭವಿಸಿದ್ದ ಭಾರೀ ಭೂಕಂಪದಲ್ಲಿ 1000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ರವಿವಾರ ನಡೆದ ಭೂಕಂಪದ ಕಾರಣ ಕುನಾರ್, ಲಘ್ಮಾನ್ ಮತ್ತು ನಂಗರ್‌ಹಾರ್ ಮತ್ತು ಕಾಬೂಲ್  ಪ್ರಾಂತದಲ್ಲೂ ಭೂಮಿ ಕಂಪಿಸಿದ್ದು ಜನತೆ ಆತಂಕಗೊAಡರು ಎಂದು ಅಧಿಕಾರಿಗಳು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News