ಪ್ರಧಾನಿ ಹುದ್ದೆಗೆ ತಾನು ಹಕ್ಕುದಾರನೂ ಅಲ್ಲ, ಅದರ ಅಪೇಕ್ಷೆಯೂ ಇಲ್ಲ: ನಿತೀಶ್ ಕುಮಾರ್

Update: 2022-09-06 10:05 GMT
Photo:PTI

ಹೊಸದಿಲ್ಲಿ: ಬಿಹಾರದಲ್ಲಿ ಬಿಜೆಪಿಯ ಮೈತ್ರಿಯನ್ನು ಕಡಿದುಕೊಂಡು ದಿಲ್ಲಿಯಲ್ಲಿ ವಿರೋಧ ಪಕ್ಷಗಳೊಂದಿಗೆ ಮತ್ತೆ ಸಂಪರ್ಕ ಸಾಧಿಸಿರುವ ನಿತೀಶ್ ಕುಮಾರ್  (Nitish Kumar)2024ರಲ್ಲಿ ಪ್ರಧಾನಿ ಹುದ್ದೆಗೆ ತಾನು ಹಕ್ಕುದಾರನೂ ಅಲ್ಲ, ಆ ಹುದ್ದೆಯ ಅಪೇಕ್ಷೆಯೂ ನನಗಿಲ್ಲ ಎಂದು ಹೇಳಿದ್ದಾರೆ.

 ಪ್ರತಿಪಕ್ಷಗಳ ಒಗ್ಗಟ್ಟಿನ ಸಲುವಾಗಿ ದಿಲ್ಲಿಯಲ್ಲಿದ್ದೇನೆ ಎಂದು ಎಡಪಕ್ಷದ ನಾಯಕ ಸೀತಾರಾಂ ಯೆಚೂರಿ ಅವರನ್ನು ಭೇಟಿ ಮಾಡಿದ ನಂತರ  ಬಿಹಾರ ಮುಖ್ಯಮಂತ್ರಿ  ಹೇಳಿದರು.

ದಿಲ್ಲಿಯಲ್ಲಿ ವಿಪಕ್ಷಗಳೊಂದಿಗಿನ  ಸಭೆಗಳು 2024 ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿರೋಧ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ತಮ್ಮ ಅಭ್ಯರ್ಥಿತನಕ್ಕೆ ಬೆಂಬಲವನ್ನು ಸಂಗ್ರಹಿಸುವ ಪ್ರಯತ್ನಗಳನ್ನು ಸೂಚಿಸುತ್ತವೆಯೇ ಎಂಬ ಪ್ರಶ್ನೆಗಳನ್ನು ನಿತೀಶ್ ಕುಮಾರ್ ಗೆ ಕೇಳಲಾಯಿತು.

"ನಾನು ಹಕ್ಕುದಾರನಲ್ಲ, ನಾನು ಅದನ್ನು ಅಪೇಕ್ಷಿಸುವುದಿಲ್ಲ. ನಾವು ಒಟ್ಟಿಗೆ ಇದ್ದೇವೆ, ಅದಕ್ಕಾಗಿಯೇ ನಾನು ಇಲ್ಲಿಗೆ ಬರುತ್ತಿದ್ದೇನೆ" ಎಂದು ನಿತೀಶ್ ಕುಮಾರ್ ಉತ್ತರಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News