×
Ad

​ಮಲ್ಪೆ: ಕರಾವಳಿ ಕಾವಲು ಪೊಲೀಸರಿಂದ ಶಿಕ್ಷಕರ ದಿನಾಚರಣೆ

Update: 2022-09-06 15:59 IST

ಉಡುಪಿ, ಸೆ.6: ಕರಾವಳಿ ಕಾವಲು ಪೊಲೀಸ್ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಉತ್ತಮ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮಲ್ಪೆಯ ಕೇಂದ್ರ ಕಚೇರಿಯಲ್ಲಿ ಸೋಮವಾರ ಆಯೋಜಿಸಲಾಗಿತ್ತು.

ಕರಾವಳಿ ಕಾವಲು ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಅಹದ್ ನೇತೃತ್ವದಲ್ಲಿ ಪೊಲೀಸ್ ಉಪಾಧೀಕ್ಷಕ ಟಿ.ಎಸ್.ಸುಲ್ಪಿ ಹಾಗೂ ಸಿಎಸ್‌ಪಿಯ 9 ಠಾಣೆಗಳ ಪಿಐಗಳ ಸಹಕಾರದೊಂದಿಗೆ ಕರಾವಳಿ ವ್ಯಾಪ್ತಿಯ ಉತ್ತಮ ಶಿಕ್ಷಕರಾದ ಸುಮಂಗಳ ಮಲ್ಪೆ, ಹೇಮಲತಾ ಮಲ್ಪೆ, ಮನೋಹರ್ ಉಪ್ಪುಂದ, ಗಣೇಶ್ ಕಾರ್ನಿಕ್ ಗಂಗೊಳ್ಳಿ, ಪವನ್ ಕುಮಾರ್ ಉಡುಪಿ, ಗಿರೀಶ್ ನಾಯಕ್ ಭಟ್ಕಳ, ಮತ್ಮಿಮ್ಮಣಿ ಮುರ್ಡೆಶ್ವರ ಅವರನ್ನು ಗುರುತಿಸಿ ಪ್ರಶಂಸನಾ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ವಿಶೇಷವಾಗಿ ಅನೇಕ ಯುವಕರಿಗೆ ಬೋಟ್ ಚಾಲನೆಯನ್ನು ಕಲಿಸಿದ ಹಿರಿಯ ಮೀನುಗಾರ ಬೋಟ್ ಚಾಲನಾ ತರಬೇತುದಾರರಾದ ರಾಮ ಮೆಂಡನ್, ಖಾಸಿಮ್ ಬಾವ, ಮೋಹನ್ ಕುಂದರ್, ನಾಗರಾಜ ಸುವರ್ಣ, ರಾಮ ಸುವರ್ಣ ಅವರನ್ನು ಗುರುವಿನ ಸ್ಥಾನಮಾನ ನೀಡಿ ಸನ್ಮಾನಿಸಲಾಯಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News