×
Ad

ಐವರು ಸಾಧಕ ಶಿಕ್ಷಕರಿಗೆ ಗೌರವ ಪುರಸ್ಕಾರ ಪ್ರದಾನ

Update: 2022-09-06 17:52 IST

ಉಡುಪಿ, ಸೆ.6: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಹಾಗೂ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲೆಯ ಐವರು ಹಿರಿಯ ಸಾಧಕ ಶಿಕ್ಷಕರಿಗೆ ಗೌರವ ಪುರಸ್ಕಾರ ಪ್ರದಾನ ಮಾಡಲಾಯಿತು.

ಉಡುಪಿಯ ಮಲಬಾರ್ ಗೋಲ್ಡ್ ಶಾಖೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಲಕ್ಷ್ಮೀನಾರಾಯಣ ಭಟ್(ಶಿಕ್ಷಣ ಹಾಗೂ ರಂಗಭೂಮಿ), ರಾಜೇಂದ್ರ ಭಟ್ ಕೆ.(ಶಿಕ್ಷಣ ಹಾಗೂ ನಿರೂಪಣೆ), ಪ್ರೊ.ನಾರಾಯಣ ಎಂ. ಹೆಗಡೆ(ಶಿಕ್ಷಣ ಹಾಗೂ ಸಂಘಟನೆ), ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ( ಶಿಕ್ಷಣ ಹಾಗೂ ಅರ್ಥಶಾಸ್ತ್ರ), ಡಾ.ರೇಖಾ ವಿ.ಬನ್ನಾಡಿ(ಶಿಕ್ಷಣ ಹಾಗೂ ಸಾಹಿತ್ಯ) ಅವರಿಗೆ ಪುರಸ್ಕಾರ ನೀಡಲಾಯಿತು.

ಸಭಾಧ್ಯಕ್ಷತೆಯನ್ನು ವಹಿಸಿದ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಮಾತನಾಡಿ ದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾ ಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ.ಶಂಕರ್, ಮಲಬಾರ್ ಗೋಲ್ಡ್ ವ್ಯವಸ್ಥಾಪಕ ಹಫೀಝ್ ರಹ್ಮಾನ್, ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ.ಉಪಸ್ಥಿತರಿದ್ದರು.

ಸಂಧ್ಯಾ ಶೆಣೈ ಸ್ವಾಗತಿಸಿದರು. ಶ್ರೀನಿವಾಸ್ ಉಪಾಧ್ಯ ವಂದಿಸಿ, ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News