×
Ad

ಇ-ಶ್ರಮ್ ಯೋಜನೆಯಡಿ ನರೇಗಾ, ಅಸಂಘಟಿತ ಕಾರ್ಮಿಕರ ನೋಂದಣಿ

Update: 2022-09-06 19:36 IST
ಸಾಂದರ್ಭಿಕ ಚಿತ್ರ

ಉಡುಪಿ, ಸೆ.6: ಕಾರ್ಮಿಕ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಯಡಿ ಉದ್ಯೋಗ ಗುರುತಿನ ಚೀಟಿ ಹೊಂದಿರುವ ಅರ್ಹ ನರೇಗಾ ಹಾಗೂ ಅಸಂಘಟಿತ ಕಾರ್ಮಿಕರು ಕೇಂದ್ರ  ಸರಕಾರದ ಇ-ಶ್ರಮ್ ಪೊರ್ಟಲ್‌ನಲ್ಲಿ ನೋಂದಾಯಿಸಲು ಸೆಪ್ಟಂಬರ್ 7ರಂದು ಗೋಳಿಹೊಳೆ, ಸೆ.8ರಂದು ಕೊಲ್ಲೂರು, ಸೆ.9ರಂದು ಜಡ್ಕಲ್ ಹಾಗೂ ಸೆ.12ರಂದು ಹಳ್ಳಿಹೊಳೆ ಗ್ರಾಪಂನಲ್ಲಿ ನೋಂದಣಿ ಶಿಬಿರ ಆಯೋಜಿಸಲಾಗಿದೆ.

16ರಿಂದ 59 ವರ್ಷದೊಳಗಿನ, ಆದಾಯ ತೆರಿಗೆ ಪಾವತಿದಾರರಾಗಿರದ, ಭವಿಷ್ಯನಿಧಿ ಹಾಗೂ ಇ.ಎಸ್.ಐ ಫಲಾನುಭಯಾಗಿರದ ಅರ್ಹ ನರೇಗಾ ಹಾಗೂ ಅಸಂಘಟಿತ ಕಾರ್ಮಿಕರು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಮತ್ತು ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿಸಿಕೊಳ್ಳಬಹುದು ಎಂದು ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News