×
Ad

ಭಟ್ಕಳ: ಶಾಲೆಯಲ್ಲಿ ಹಾವು ಕಚ್ಚಿ ಬಾಲಕನಿಗೆ ಗಂಭೀರ ಗಾಯ

Update: 2022-09-06 19:54 IST
ಸಾಂದರ್ಭಿಕ ಚಿತ್ರ

ಭಟ್ಕಳ: ಶಾಲೆಯಲ್ಲಿ ಹಾವು ಕಚ್ಚಿ 12 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಬಾಲಕನನ್ನು ಅಲ್ಫಾಝ್ ಸರ್ತಾಝ್ ಎಂದು ಗುರುತಿಸಲಾಗಿದೆ. ಮಂಗಳವಾರ ಮಧ್ಯಾಹ್ನ 3:30ರ ಸುಮಾರಿಗೆ ಈ ಘಟನೆ ನಡೆದಿದೆ.‌

ಮುರ್ಡೇಶ್ವರ ನ್ಯಾಷನಲ್ ಕಾಲನಿಯಲ್ಲಿರುವ ಸರ್ಕಾರಿ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ತರಗತಿಯಲ್ಲಿದ್ದ ವೇಳೆ ಕಿಟಕಿಯ ಹೊರಗೆ ಪೆನ್ಸಿಲ್‌ ಬಿದ್ದಿದ್ದು, ಅದನ್ನು ತರಲು ಹೊರಗೆ ಹೋಗುತ್ತಿದ್ದ ವೇಳೆ ಹಾವು ಬಾಲಕನ ಕಾಲಿಗೆ ಕಚ್ಚಿತು ಎಂದು ತಿಳಿದುಬಂದಿದೆ.

ಕೂಡಲೇ ವಿದ್ಯಾರ್ಥಿಯನ್ನು ಮುರ್ಡೇಶ್ವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಭಟ್ಕಳ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಹಾವು ಕಚ್ಚಿದ ಬಗ್ಗೆ ಮಾಹಿತಿ ಪಡೆದ ಭಟ್ಕಳ ಬ್ಲಾಕ್ ಶಿಕ್ಷಣ ಕಚೇರಿಯ ಅಧಿಕಾರಿಗಳು ಭಟ್ಕಳ ಸರಕಾರಿ ಆಸ್ಪತ್ರೆಗೆ ಆಗಮಿಸಿ ವಿದ್ಯಾರ್ಥಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News