ಮಂಗೋಲಿಯಾ ಅಧ್ಯಕ್ಷರಿಂದ ಕುದುರೆಯನ್ನು ಉಡುಗೊರೆಯಾಗಿ ಪಡೆದ ರಕ್ಷಣಾ ಸಚಿವ ರಾಜನಾಥ್ ಸಿಂಗ್

Update: 2022-09-07 05:12 GMT
Photo:twitter

ಉಲಾನ್‌ಬಾತರ್: ಮಂಗೋಲಿಯಾಕ್ಕೆ ಭೇಟಿ ನೀಡಿದ ಭಾರತದ ಮೊದಲ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Defence Minister Rajnath Singh)ಅವರಿಗೆ ಆ ದೇಶದ ಅಧ್ಯಕ್ಷರು ಬುಧವಾರ ಕುದುರೆಯೊಂದನ್ನು ಉಡುಗೊರೆಯಾಗಿ ನೀಡಿದರು,

ಪ್ರಧಾನಿ ನರೇಂದ್ರ ಮೋದಿ ಅವರು ಏಳು ವರ್ಷಗಳ ಹಿಂದೆ ಮಂಗೋಲಿಯ ದೇಶದ ಮುಖಂಡರಿಂದ  ಇದೇ ರೀತಿಯ ಉಡುಗೊರೆಯನ್ನು ಸ್ವೀಕರಿಸಿದ್ದರು.

"ಮಂಗೋಲಿಯಾದಲ್ಲಿರುವ ನಮ್ಮ ವಿಶೇಷ ಸ್ನೇಹಿತರಿಂದ ವಿಶೇಷ ಉಡುಗೊರೆ. ನಾನು ಈ ಭವ್ಯ ಸುಂದರಿಗೆ 'ತೇಜಸ್' ಎಂದು ಹೆಸರಿಟ್ಟಿದ್ದೇನೆ. ಅಧ್ಯಕ್ಷ ಖುರೆಲ್‌ಸುಖ್ ಗೆ ಧನ್ಯವಾದಗಳು, ಮಂಗೋಲಿಯಾಕ್ಕೆ ಧನ್ಯವಾದಗಳು" ಎಂದು  ಬುಧವಾರ ಬಿಳಿ ಕುದುರೆಯ ಚಿತ್ರಗಳೊಂದಿಗೆ ಸಿಂಗ್ ಟ್ವೀಟ್ ಮಾಡಿದ್ದಾರೆ.

"ಮಂಗೋಲಿಯಾ ಅಧ್ಯಕ್ಷ ಎಚ್‌ಇಯು ಖುರೆಲ್‌ಸುಖ್ ಅವರೊಂದಿಗೆ ಉಲಾನ್‌ಬಾತರ್‌ನಲ್ಲಿ ನಡೆದ ಸಭೆ ಅತ್ಯುತ್ತಮವಾಗಿತ್ತು. ಅವರು ದೇಶದ ಪ್ರಧಾನಿಯಾಗಿದ್ದಾಗ 2018 ರಲ್ಲಿ ಅವರೊಂದಿಗಿನ ನನ್ನ ಕೊನೆಯ ಭೇಟಿಯನ್ನು ನೆನಪಿಸಿಕೊಂಡರು. ಮಂಗೋಲಿಯಾದೊಂದಿಗೆ ನಮ್ಮ ಬಹುಮುಖಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಹೆಚ್ಚಿಸಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ" ಎಂದು ಸಿಂಗ್ ಟ್ವೀಟಿಸಿದ್ದಾರೆ.

2015 ರಲ್ಲಿ, ಪ್ರಧಾನಿ ಮೋದಿ ಅವರು ಮಂಗೋಲಿಯ ದೇಶಕ್ಕೆ ತಮ್ಮ ಐತಿಹಾಸಿಕ ಭೇಟಿಯ ಸಂದರ್ಭದಲ್ಲಿ ಆಗಿನ ಮಂಗೋಲಿಯನ್ ಪ್ರಧಾನಮಂತ್ರಿ  ಚಿಮೆಡ್ ಸೈಖಾನ್‌ಬಿಲೆಗ್ ಅವರಿಂದ ಕಂದು ಬಣ್ಣದ ಓಟದ ಕುದುರೆಯನ್ನು  ವಿಶೇಷ ಉಡುಗೊರೆಯಾಗಿ ಪಡೆದಿದ್ದರು.

ಪ್ರಾದೇಶಿಕ ಭದ್ರತೆ ಹಾಗೂ ಭೌಗೋಳಿಕ-ರಾಜಕೀಯ ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ ಉಭಯ ದೇಶಗಳೊಂದಿಗೆ ಭಾರತದ ಕಾರ್ಯತಂತ್ರ ಮತ್ತು ರಕ್ಷಣಾ ಸಂಬಂಧಗಳನ್ನು ವಿಸ್ತರಿಸುವ ಉದ್ದೇಶದಿಂದ ರಕ್ಷಣಾ ಸಚಿವ ಸಿಂಗ್ ಸೋಮವಾರದಿಂದ ಐದು ದಿನಗಳ ಮಂಗೋಲಿಯಾ ಮತ್ತು ಜಪಾನ್‌ಗೆ ಭೇಟಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News