×
Ad

ಸೆ.10: ದ.ಕ. ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದಿಂದ ಗುರು ಸಂದೇಶ ಯಾತ್ರೆ

Update: 2022-09-07 12:35 IST

ಮಂಗಳೂರು, ಸೆ.7: ದ.ಕ. ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ನೇತ್ರತ್ವದಲ್ಲಿ ಬ್ರಹ್ಮ ಶ್ರೀ ಗುರುಗಳ 168ನೇ ಜಯಂತಿಯ ಪ್ರಯುಕ್ತ ಗುರು ಸಂದೇಶ ಯಾತ್ರೆ ಸೆ.10ರಂದು ಬೆಳಗೆಗೆ 9:30ಕ್ಕೆ ನಡೆಯಲಿದೆ. ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ವಿಶ್ವಾಸ್ ಕುಮಾರ್ ದಾಸ್ ತಿಳಿಸಿದ್ದಾರೆ.

ಈ ಯಾತ್ರೆಯ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಹೊರಟು ಕೆ.ಎಸ್.ರಾವ್ ರಸ್ತೆ, ಗೋವಿಂದ ಪೈ ಸರ್ಕಲ್, ಡೊಂಗರಕೇರಿ, ಸುಚಿತ್ರ, ಅಳಕೆ ಮೂಲಕ ಹಾದು ಹೋಗಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ನಾರಾಯಣ ಗುರು ಸ್ವಾಮಿಯವರಿಗೆ ಪೂಜೆ ಸಲ್ಲಿಸುವುದರೊಂದಿಗೆ ಸಮಾಪನಗೊಳ್ಳಲಿದೆ. ಜಿಲ್ಲಾ ಕಾಂಗ್ರೆಸ್‌ನ ನಾಯಕರು , ಹಿಂದುಳಿದ ಸಮಾಜದ ಅನುಯಾಯಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ನಾರಾಯಣ ಗುರುಗಳ ರಾಜ್ಯ ಮಟ್ಟದ ಸರಕಾರಿ ಕಾರ್ಯಕ್ರಮವನ್ನು ಬಿಜೆಪಿ ಪಕ್ಷದ ಕಾರ್ಯಕ್ರಮ ಮಾಡಲು ಹೊರಟಿರುವ ಕ್ರಮವನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ವಿಶ್ವಾಸ್ ಕುಮಾರ್ ದಾಸ್ ತಿಳಿಸಿದ್ದಾರೆ.

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿಡಬೇಕೆಂದು ಆಗ್ರಹಿಸುವುದಾಗಿ ವಿಶ್ವಾಸ್ ಕುಮಾರ್ ದಾಸ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪದ್ಮನಾಭ ಅಮೀನ್, ಪ್ರಕಾಶ್ ಸಾಲ್ಯಾನ್, ಉದಯ ಆಚಾರ್, ಉಮೇಶ್ ದಂಡಕೇರಿ, ಗೀತಾ ಪ್ರವೀಣ್, ಸುಬೀನ್ ಕರ್ಕೇರ, ರವಿರಾಜ್ ಅಮೀನ್, ದಿನೇಶ್ ಕುಂಪಲ, ಚಂದ್ರಹಾಸ ಪೂಜಾರಿ, ಕೀರ್ತಿರಾಜ್ ಪೂಜಾರಿ, ಯೋಗೀಶ್ ಸುವರ್ಣ, ಸುನೀಲ್ ಪೂಜಾರಿ, ಸದಾಶಿವ, ಭುವನ್ ಡಿ. ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News