ಕ್ರಿಕೆಟಿಗ ಸಂದೀಪ್ ಲಮಿಚಾನೆ ವಿರುದ್ಧ ಅತ್ಯಾಚಾರದ ದೂರು: ತನಿಖೆ ಆರಂಭಿಸಿದ ನೇಪಾಳ ಪೊಲೀಸರು

Update: 2022-09-07 10:28 GMT
Photo:twitter

ಕಾಠ್ಮಂಡು: ನೇಪಾಳ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕ ಸಂದೀಪ್ ಲಮಿಚಾನೆ(Nepali national cricket team captain, Sandeep Lamichhane) ವಿರುದ್ಧದ ಅತ್ಯಾಚಾರದ ದೂರಿನ ಮೇರೆಗೆ ನೇಪಾಳ ಪೊಲೀಸರು ಬುಧವಾರ ತನಿಖೆ ಆರಂಭಿಸಿದ್ದಾರೆ.

17 ವರ್ಷದ ಅಪ್ರಾಪ್ತೆ ನೀಡಿದ ದೂರಿನ ಮೇರೆಗೆ ಕ್ರಿಕೆಟಿಗನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ನೇಪಾಳ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಏತನ್ಮಧ್ಯೆ, 2021 ರ ಡಿಸೆಂಬರ್‌ನಲ್ಲಿ ಜ್ಞಾನೇಂದ್ರ ಮಲ್ಲಾ ಬದಲಿಗೆ ಸಂದೀಪ್ ನೇಪಾಳದ ರಾಷ್ಟ್ರೀಯ ತಂಡದ ನಾಯಕರಾಗಿ ನೇಮಕಗೊಂಡರು.

ಬಲಗೈ ಲೆಗ್ ಸ್ಪಿನ್ನರ್ ನೇಪಾಳಕ್ಕಾಗಿ ಇದುವರೆಗೆ 30 ಏಕದಿನ ಹಾಗೂ 44 ಟಿ-20 ಪಂದ್ಯ ಗಳನ್ನು ಆಡಿದ್ದಾರೆ.  ಒಟ್ಟು 164 ಅಂತರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಏಕದಿನ ಹಾಗೂ ಟಿ-20 ಎರಡರಲ್ಲೂ ನೇಪಾಳದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News