ಇಂಧನವನ್ನು ‘ಅಸ್ತ್ರ’ವಾಗಿ ಬಳಸಿಕೊಳ್ಳುತ್ತಿರುವ ಪುತಿನ್ : ಅಮೆರಿಕ ಆರೋಪ

Update: 2022-09-08 18:12 GMT

ವಾಶಿಂಗ್ಟನ್,ಸೆ.8: ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ತನ್ನ ದೇಶದ ಇಂಧನ ಸಂಪನ್ಮೂಲಗಳನ್ನು ‘ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ ’ ಎಂದು ಅಮೆರಿಕ ಶ್ವೇತಭವನ ಆರೋಪಿಸಿದೆ. ತನ್ನ ಇಂಧನ ಸಂಪನ್ಮೂಲಗಳಿಗೆ ಅಮೆರಿಕವು ಮಿತಿಯನ್ನು ವಿಧಿಸಲು ಯತ್ನಿಸಿದಲ್ಲಿ, ತಾನು ಪಾಶ್ಚಾತ್ಯ ರಾಷ್ಟ್ರಗಳಿಗೆ ಇಂಧನ ಪೂರೈಕೆಯನ್ನು ಸಂಪೂರ್ಣ ರದ್ದುಪಡಿಸುವುದಾಗಿ ಪುತಿನ್ ಬೆದರಿಕೆ ಹಾಕಿದ ಬೆನ್ನಲ್ಲೇ ಅಮೆರಿಕ ಈ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.

  ‘‘ಪುತಿನ್ ಅವರ ಒಂದೊಂದು ಮಾತು ಮತ್ತು ಕೃತಿಗಳು ಅವರು ಇಂಧನವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆಂಬುದನ್ನು ತೋರಿಸುತ್ತಿದೆ. ಆದರೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಯುರೋಪ್‌ನ ನಮ್ಮ ಪಾಲುದಾರರು ಪುತಿನ್ ಅವರ ಈ ತಂತ್ರದ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದರು. ರಶ್ಯವು ಪಾಶ್ಚಾತ್ಯ ರಾಷ್ಟ್ರಗಳಿಗೆ ಮಾರುವ ಇಂಧನಕ್ಕೆ ಹೇಗೆ ದರ ಮಿತಿಯನ್ನು ವಿಧಿಸುವ ವಿವಿಧ ಪ್ರಕ್ರಿಯೆಗಳ ಬಗ್ಗೆ ನಾವು ಚರ್ಚಿಸಿದ್ದೇವೆ’’ ಎಂದು ಅಮೆರಿಕದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರಿನ್ ಜೀನ್ ಪಿಯರೆ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

     ತೈಲ ಮಾರಾಟದಿಂದ ದೊರೆಯುವ ರಶ್ಯದ ಆದಾಯವನ್ನು ನಿಯಂತ್ರಿಸಲು ಕಳೆದ ವಾರ ನಡೆದ ಜಿ7 ರಾಷ್ಟ್ರಗಳ ಹಣಕಾಸು ಸಚಿವರ ಸಭೆಯಲ್ಲಿ ನಿರ್ಧರಿಸಲಾಗಿತ್ತು. ರಶ್ಯವು ಪಾಶ್ಚಾತ್ಯ ರಾಷ್ಟ್ರಗಳಿಗೆ ತಾನು ಮಾಡುವ ತೈಲ ಮಾರಾಟದಿಂದ ದೊರೆಯುವ ಆದಾಯವನ್ನು ಉಕ್ರೇನ್ ಯುದ್ದಕ್ಕೆ ಬಳಸಿಕೊಳ್ಳುತ್ತಿರುವ ಸಾಧ್ಯತೆಯಿದೆಯೆಂದು ಸಭೆಯಲ್ಲಿ ಪ್ರತಿಪಾದಿಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News