ಅಫ್ಘಾನ್ ವಿರುದ್ಧ 2 ಸಿಕ್ಸರ್ ಸಿಡಿಸಿದ ಬ್ಯಾಟ್ ಹರಾಜಿಗಿಟ್ಟು ಪಾಕ್ ಪ್ರವಾಹಕ್ಕೆ ನೆರವು ನೀಡಲು ಮುಂದಾದ ನಸೀಮ್ ಶಾ

Update: 2022-09-10 06:53 GMT

ದುಬೈ: ಪಾಕಿಸ್ತಾನ ಹಾಗೂ  ಅಫ್ಘಾನಿಸ್ತಾನ ನಡುವಿನ ಏಶ್ಯಕಪ್ ಸೂಪರ್ 4  ಪಂದ್ಯವು(Asia Cup Super 4 clash ) ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ರೋಚಕ ಮುಖಾಮುಖಿಯಾಗಿದೆ. ಹಲವಾರು ತಿರುವುಗಳ ನಂತರ ಬಾಬರ್ ಆಝಂ ನೇತೃತ್ವದ ತಂಡ ಅಂತಿಮವಾಗಿ ಕೊನೆಯ ಓವರ್‌ನಲ್ಲಿ 130 ರನ್‌ಗಳ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಯಿತು. ಪಾಕ್ ಗೆ ಗೆಲ್ಲಲು ಆರು ಎಸೆತಗಳಲ್ಲಿ 11 ರನ್  ಅಗತ್ಯವಿತ್ತು. ಕೈಯಲ್ಲಿಕೇವಲ  ಒಂದು ವಿಕೆಟ್ ಬಾಕಿ ಇತ್ತು. ಆಗ, ಪಾಕಿಸ್ತಾನದ ವೇಗಿ ನಸೀಮ್ ಶಾ (Pakistan's pacer Naseem Shah )ಅವರು  ಫಾರೂಕಿ ಅವರ ಕೊನೆಯ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಪಂದ್ಯವನ್ನು ಪಾಕ್ ನತ್ತ  ತಿರುಗಿಸಿದರು. ನಸೀಮ್ ತನ್ನ ಬ್ಯಾಟಿಂಗ್ ನಿಂದ ರಾತ್ರೋ ರಾತ್ರಿ ಹೀರೋ ಆದರು.

ನಸೀಮ್ ಎರಡು ಗೆಲುವಿನ ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ ಅನ್ನು ಸಹ ಆಟಗಾರ ಮುಹಮ್ಮದ್ ಹಸ್ನೈನ್   ಅವರು ನಸೀಮ್ ಗೆ ಉಡುಗೊರೆಯಾಗಿ ನೀಡಿದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ನಸೀಮ್ ಅವರು ಬ್ಯಾಟ್ ಅನ್ನು ಹರಾಜಿಗೆ ಇಡುವುದಾಗಿ ಘೋಷಿಸಿದರು ಹಾಗೂ ಅದರ ಅರ್ಧದಷ್ಟು ಮೊತ್ತವನ್ನು ಪಾಕಿಸ್ತಾನದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ಬಳಸುವುದಾಗಿ ಪ್ರಕಟಿಸಿದರು.

ಕಳೆದ ತಿಂಗಳಿನಿಂದ ಪಾಕಿಸ್ತಾನದ ಹಲವು ಪ್ರದೇಶಗಳು ಪ್ರವಾಹ ಎದುರಿಸುತ್ತಿವೆ.

ಇತ್ತೀಚಿನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯ ಪ್ರಕಾರ ಪ್ರವಾಹದಿಂದಾಗಿ ಸುಮಾರು 1,400 ಜನರು ಸಾವನ್ನಪ್ಪಿದ್ದಾರೆ. ಸುಮಾರು 7,000 ಕಿ.ಮೀ. ರಸ್ತೆಗಳು ಹಾನಿಗೊಳಗಾಗಿವೆ. ಸುಮಾರು 246 ಸೇತುವೆಗಳು ಕೊಚ್ಚಿಹೋಗಿವೆ ಹಾಗೂ  1.7 ಮಿಲಿಯನ್‌ಗಿಂತಲೂ ಹೆಚ್ಚು ಮನೆಗಳು ಹಾಗೂ  ವ್ಯಾಪಾರದ ಸ್ಥಳಗಳು ನಾಶವಾಗಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News