ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೊನ್ ಫಿಂಚ್

Update: 2022-09-10 09:14 GMT
AP Photo

ಕೈರ್ನ್ಸ್ (ಆಸ್ಟ್ರೇಲಿಯಾ): ಆಸ್ಟ್ರೇಲಿಯದ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕ ಆ್ಯರೊನ್ ಫಿಂಚ್ ಶನಿವಾರ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ (Australia captain Aaron Finch announces retirement from one-day cricket)ಅಚ್ಚರಿಗೊಳಿಸಿದರು. ಇದು ಬ್ಯಾಟನ್ ಹಸ್ತಾಂತರಿಸುವ ಸಮಯ ಎಂದು ಅವರು ಹೇಳಿದ್ದಾರೆ.

35 ವರ್ಷ ವಯಸ್ಸಿನ ಫಿಂಚ್ ಅವರು ತಮ್ಮ 146 ನೇ ಮತ್ತು ಅಂತಿಮ ಏಕದಿನ ಪಂದ್ಯವನ್ನು ರವಿವಾರ ಕೇರ್ನ್ಸ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಆಡಲಿದ್ದಾರೆ. 50 ಓವರ್‌ಗಳ ಆಟದಲ್ಲಿ ಫಿಂಚ್  ಅವರು 5,401 ರನ್ ಗಳಿಸಿ ಉತ್ತಮ ಸಾಧನ ಮಾಡಿದ್ದರು.

17 ಶತಕಗಳನ್ನು ಗಳಿಸುವ ಮೂಲಕ ತಮ್ಮ ದೇಶದ ಶ್ರೇಷ್ಠ ಆಟಗಾರರಾದ ರಿಕಿ ಪಾಂಟಿಂಗ್ (29), ಡೇವಿಡ್ ವಾರ್ನರ್ ಹಾಗೂ  ಮಾರ್ಕ್ ವಾ (ಇಬ್ಬರೂ 18) ಬಳಿಕದ ಸ್ಥಾನ ಪಡೆದಿದ್ದರು.

ಮುಂದಿನ ತಿಂಗಳು ತವರು ನೆಲದಲ್ಲಿ ವಿಶ್ವಕಪ್ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ತಯಾರಿ ನಡೆಸುತ್ತಿರುವ ಆಸ್ಟ್ರೇಲಿಯ ಟ್ವೆಂಟಿ-20  ತಂಡವನ್ನು ಫಿಂಚ್ ಮುನ್ನಡೆಸಲಿದ್ದಾರೆ.

"ಇದು ಕೆಲವು ನಂಬಲಾಗದ ನೆನಪುಗಳೊಂದಿಗೆ ಅದ್ಭುತ ಪಯಣವಾಗಿದೆ" ಎಂದು ಏಕದಿನ ತಂಡವನ್ನು 54 ಬಾರಿ ನಾಯಕನಾಗಿ ಮುನ್ನಡೆಸಿದ್ದ ಫಿಂಚ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News