ಜಾಗತಿಕ ಆರ್ಥಿಕ ಬೆಳವಣಿಗೆಗೆ ಅಂತರಾಷ್ಟ್ರೀಯ ಸಹಕಾರ ಅಗತ್ಯ: ಸೌದಿ ಅರೇಬಿಯಾ

Update: 2022-09-10 17:04 GMT

ಜಕಾರ್ತ,  ಸೆ.10: ಜಾಗತಿಕ ಆರ್ಥಿಕ ಬೆಳವಣಿಗೆಗೆ ಅಂತರಾಷ್ಟ್ರೀಯ ಸಹಕಾರದ ಅಗತ್ಯವಿದೆ ಎಂದು ಸೌದಿ ಅರೆಬಿಯಾದ ಆರ್ಥಿಕ ಮತ್ತು ಯೋಜನಾ ಇಲಾಖೆಯ ಸಚಿವ ಫೈಸಲ್-ಅಲ್ ಇಬ್ರಾಹಿಂ ಹೇಳಿದ್ದಾರೆ.

‌ಇಂಡೊನೇಶ್ಯಾದ ಬೆಲಿತುಂಗ್ನಲ್ಲಿ ನಡೆದ ಜಿ20 ದೇಶಗಳ ಸಚಿವರ ಸಭೆಯ ಸಮಾರೋಪದಲ್ಲಿ ಮಾತನಾಡಿದ ಅವರು, ಜಾಗತಿಕ ಸಹಕಾರವನ್ನು ನವೀಕರಿಸಲು ಮತ್ತು ವಿಶ್ವಸಂಸ್ಥೆಯ 17 ಸುಸ್ಥಿರ ಅಭಿವೃದ್ಧಿ ಗುರಿಯನ್ನು ಸಾಧಿಸುವಲ್ಲಿ ಸೌದಿಯ ಬದ್ಧತೆಯನ್ನು ಒತ್ತಿ ಹೇಳಿದರು.

2 ದಿನದ ಸಭೆಯು ಹೆಚ್ಚು ನಿಕಟವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ ಮತ್ತು ಅಭಿವೃದ್ಧಿಶೀಲ ದೇಶಗಳನ್ನು ಬೆಂಬಲಿಸಲು ಸಶಕ್ತ ಕ್ರಮಗಳನ್ನು ಮುಂದಿಡಲು ಅವಕಾಶ ಮಾಡಿಕೊಟ್ಟಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News