ಕೊಳಚೆ ನೀರಿನಲ್ಲಿ ಕಂಡುಬಂದ ವೈರಸ್:‌ ʼಪೋಲಿಯೊʼ ತುರ್ತು ಪರಿಸ್ಥಿತಿ ಘೋಷಿಸಿದ ನ್ಯೂಯಾರ್ಕ್‌

Update: 2022-09-11 16:32 GMT

ವಾಷಿಂಗ್ಟನ್, ಸೆ.11: ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ತ್ಯಾಜ್ಯ ನೀರಿನಲ್ಲಿ ಪೋಲಿಯೊ ರೋಗಾಣು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

‌ನಸಾವು ಗ್ರಾಮದಲ್ಲಿನ ತ್ಯಾಜ್ಯ ನೀರಿನಲ್ಲಿ ವೈರಸ್ ಪತ್ತೆಯಾಗಿರುವುದರಿಂದ, ಲಸಿಕಾಕರಣದ ಪ್ರಮಾಣ ಹೆಚ್ಚಿಸುವ ಪ್ರಯತ್ನ ನಡೆಸಲಾಗುವುದು ಎಂದು ತುರ್ತು ಪರಿಸ್ಥಿತಿ ಘೋಷಿಸಿದ ನಗರದ ಗವರ್ನರ್ ಕ್ಯಾಥಿ ಹೊಚುಲ್ ಹೇಳಿದ್ದಾರೆ. ಲಸಿಕೆ ನಿರ್ವಾಹಕರ ಜಾಲವನ್ನು ವಿಸ್ತರಿಸಿದ್ದು ತುರ್ತು ವೈದ್ಯಕೀಯ ಕಾರ್ಯಕರ್ತರು, ಶುಶ್ರೂಷಕಿಯರು ಮತ್ತು ಔಷಧ ಜ್ಞಾನಿಗಳನ್ನು ಈ ಪಟ್ಟಿಗೆ ಸೇರಿಸಲಾಗುವುದು ಎಂದು ನ್ಯೂಯಾರ್ಕ್ ನ ಆರೋಗ್ಯ ಇಲಾಖೆಯ ಹೇಳಿಕೆ ತಿಳಿಸಿದೆ.

ಪೋಲಿಯೊ ಬಗ್ಗೆ ನಿರ್ಲಕ್ಷ ವಹಿಸಲು ಸಾಧ್ಯವಿಲ್ಲ. ನೀವು ಅಥವಾ ನಿಮ್ಮ ಮಗು ಲಸಿಕೆ ಪಡೆಯದಿದ್ದರೆ ಪಾರ್ಶ್ವವಾಯು ಕಾಯಿಲೆಯ ಅಪಾಯ ಹೆಚ್ಚಿರುತ್ತದೆ. ಯಾವುದೇ ಅಪಾಯಕ್ಕೆ ಆಹ್ವಾನ ನೀಡಬೇಡಿ’ ಎಂದು ಆರೋಗ್ಯ ಆಯುಕ್ತೆ ಮೇರಿ ಬ್ಯಾಸೆಟ್ ಜನತೆಗೆ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News