×
Ad

ರಸಪ್ರಶ್ನೆ ಸ್ಪರ್ಧೆ: ಗಂಗೊಳ್ಳಿ ತೌಹೀದ್ ಶಾಲೆ ಪ್ರಥಮ, ಸಾಲಿಹಾತ್ ಸ್ಕೂಲ್ ದ್ವೀತಿಯ

Update: 2022-09-11 18:03 IST

ಉಡುಪಿ, ಸೆ.11: ಎಸ್‌ಐಓ ಉಡುಪಿ ಜಿಲ್ಲಾ ವತಿಯಿಂದ ಪ್ರವಾದಿ ಮುಹಮ್ಮದ್(ಸ) ಅರಿಯಿರಿ ಎಂಬ ವಿಚಾರದಲ್ಲಿ ಹೂಡೆಯ ಸಾಲಿಹಾತ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಗಂಗೊಳ್ಳಿ ತೌಹೀದ್ ಶಾಲೆ ಪ್ರಥಮ ಹಾಗೂ ಹೂಡೆ ಸಾಲಿಹಾತ್ ಶಾಲೆ ದ್ವಿತೀಯ ಸ್ಥಾನ ಗೆದ್ದುಕೊಂಡಿತು.

ಸ್ಪರ್ಧಾಕೂಟದಲ್ಲಿ ಒಟ್ಟು ಒಂಭತ್ತು ಶಾಲೆಗಳು ಭಾಗವಹಿಸಿದ್ದವು. ಎರಡನೇ ಹಂತದಲ್ಲಿ ನಾಲ್ಕು ಶಾಲೆಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮೌಲನ ಆದಮ್ ಸಾಹೇಬ್, ಎಸ್‌ಐಓ ಜಿಲ್ಲಾಧ್ಯಕ್ಷ ಅಫ್ವಾನ್ ಹೂಡೆ, ಜಿಲ್ಲಾ ಕಾರ್ಯದರ್ಶಿ ಡಾ.ಫಹೀಮ್, ಎಸ್‌ಐಓ ಹೂಡೆ ಅಧ್ಯಕ್ಷ ಅಸ್ಜದ್, ಫೈಸಲ್ ಗುಜ್ಜರಬೆಟ್ಟು, ಸ್ಪರ್ಧಾವಳಿ ಸಂಚಾಲಕ ಫೈಝ್ ಕತೀಬ್, ಮೌಲಾನ ಶಾಹೀದ್ ನದ್ವಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News