×
Ad

ಇಮ್ರಾನ್‌ ಖಾನ್ ಜಾಮೀನು ವಿಸ್ತರಣೆ

Update: 2022-09-12 22:14 IST

ಇಸ್ಲಮಾಬಾದ್, ಸೆ.12: ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಮಂಜೂರುಗೊಳಿಸಿದ್ದ ಜಾಮೀನಿನ ಅವಧಿಯನ್ನು ಪಾಕಿಸ್ತಾನದ ನ್ಯಾಯಾಲಯ ಸೆಪ್ಟಂಬರ್ 20ರವರೆಗೆ ವಿಸ್ತರಿಸಿದೆ ಎಂದು ಇಮ್ರಾನ್ ಅವರ ವಕೀಲರು ಹೇಳಿದ್ದಾರೆ.

‌ಆಗಸ್ಟ್ನಲ್ಲಿ ನಡೆದಿದ್ದ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಇಮ್ರಾನ್‌ ಖಾನ್ ಪೊಲೀಸರು ಹಾಗೂ ನ್ಯಾಯಾಂಗ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿದ್ದರು ಎಂದು ಆರೋಪಿಸಲಾಗಿದ್ದು ಅವರ ವಿರುದ್ಧ ಭಯೋತ್ಪಾದನೆ ಪ್ರಕರಣ ದಾಖಲಿಸಲಾಗಿದೆ. ಬಳಿಕ ನ್ಯಾಯಾಲಯ ಇಮ್ರಾನ್ ಗೆ ಜಾಮೀನು ಮಂಜೂರುಗೊಳಿಸಿತ್ತು.

‌ಜಾಮೀನಿನ ಅವಧಿ ಸೆಪ್ಟಂಬರ್ 12ಕ್ಕೆ ಅಂತ್ಯವಾದ ಹಿನ್ನೆಲೆಯಲ್ಲಿ ಸೋಮವಾರ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಅವಧಿ ವಿಸ್ತರಣೆ ಕೋರಿದರು. ಇದಕ್ಕೆ ಸಮ್ಮತಿಸಿದ ನ್ಯಾಯಾಲಯ ಜಾಮೀನು ಅವಧಿಯನ್ನು 8 ದಿನ ವಿಸ್ತರಿಸಿದೆ ಎಂದು ವರದಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News