ಭಾರತದ ಟ್ವೆಂಟಿ-20 ವಿಶ್ವಕಪ್ ನ ಪ್ರಮುಖ ತಂಡದಿಂದ ಅಯ್ಯರ್, ಶಮಿ ಹೊರಗಿಟ್ಟಿದ್ದಕ್ಕೆ ಮುಹಮ್ಮದ್ ಅಝರುದ್ದೀನ್ ಅಚ್ಚರಿ

Update: 2022-09-13 14:39 GMT

ಹೊಸದಿಲ್ಲಿ: ಭಾರತದ ಟ್ವೆಂಟಿ-20 ವಿಶ್ವಕಪ್ ನ 15ರ ಬಳಗದಿಂದ ಮುಹಮ್ಮದ್ ಶಮಿ(Mohammed Shami ) ಹಾಗೂ  ಶ್ರೇಯಸ್ ಅಯ್ಯರ್ (Shreyas Iyer)ಅವರನ್ನು ಹೊರಗಿಟ್ಟಿದ್ದಕ್ಕೆ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ (Mohammad Azharuddin)ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಭಾರತದ ಟಿ-20 ವಿಶ್ವಕಪ್ ತಂಡದಿಂದ ಸಂತುಷ್ಟರಾಗದ ಅಝರುದ್ದೀನ್ ಭಾರತದ 15 ಸದಸ್ಯರ ತಂಡದಲ್ಲಿ ಶ್ರೇಯಸ್ ಅಯ್ಯರ್ ಹಾಗೂ  ಅನುಭವಿ ವೇಗದ ಬೌಲರ್ ಮುಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತವು ತನ್ನ  ಟಿ20 ವಿಶ್ವಕಪ್ ಅನ್ನು ಸೆಪ್ಟೆಂಬರ್ 12 ರಂದು ಸೋಮವಾರ ಅಂತಿಮಗೊಳಿಸಿದೆ. ಇದು ಪಂದ್ಯಾವಳಿಯ ಕಳೆದ ಆವೃತ್ತಿಗಿಂತ ವಿಭಿನ್ನವಾಗಿ ಕಾಣುವ ಬೌಲಿಂಗ್ ದಾಳಿಯನ್ನು ಒಳಗೊಂಡಿತ್ತು. ಕಳೆದ ಆವೃತ್ತಿಯ ವಿಶ್ವಕಪ್ ನಲ್ಲಿದ್ದ ಇಬ್ಬರು ಸ್ಪಿನ್ನರ್‌ಗಳು ಈ ಬಾರಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ ಹಾಗೂ  ವೇಗದ ವಿಭಾಗದಲ್ಲಿ ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ ಕುಮಾರ್  ಹಾಗೂ  ಅರ್ಷ್‌ದೀಪ್ ಸಿಂಗ್ ಅವರಂತಹ ಆಟಗಾರರನ್ನು ಸೇರಿಸಿಕೊಳ್ಳಲಾಗಿದೆ.

ಕಳೆದ ಕೆಲವು ಸಮಯದಿಂದ ಟಿ 20 ತಂಡದಲ್ಲಿಕಡೆಗಣಿಸಲ್ಪಡುತ್ತಿರುವ ಮುಹಮ್ಮದ್ ಶಮಿಯನ್ನು ಭಾರತ ತಂಡಕ್ಕೆ ಮೀಸಲು ಆಟಗಾರನಾಗಿ ಹೆಸರಿಸಲಾಗಿದೆ.

"ಪ್ರಮುಖ ತಂಡದಿಂದ ಶ್ರೇಯಸ್ ಅಯ್ಯರ್ ಹಾಗೂ  ಶಮಿ ಅವರನ್ನು ಹೊರಗಿಟ್ಟಿರುವುದು ಆಶ್ಚರ್ಯ ತಂದಿದೆ. ದೀಪಕ್ ಹೂಡಾ ಬದಲಿಗೆ ಶ್ರೇಯಸ್ ಅಯ್ಯರ್ ಹಾಗೂ  ಹರ್ಷಲ್ ಪಟೇಲ್ ಸ್ಥಾನದಲ್ಲಿ ಶಮಿ ನನ್ನ ಆಯ್ಕೆಯಾಗಿದ್ದಾರೆ" ಎಂದು ಮಾಜಿ ಕ್ರಿಕೆಟಿಗ ಟ್ವಿಟರ್ ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News