'ಕೇರಳದಲ್ಲಿ 12 ದಿನ, ಉ.ಪ್ರ.ದಲ್ಲಿ 2 ದಿನ': ಭಾರತ್ ಜೋಡೋ ಯಾತ್ರೆ ಟೀಕಿಸಿದ ಸಿಪಿಐ(ಎಂ); ಕಾಂಗ್ರೆಸ್‌ ತಿರುಗೇಟು

Update: 2022-09-13 07:59 GMT

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರ ಭಾರತ್  ಜೋಡೋ ಯಾತ್ರಾದ ಅವಧಿ ಕೇರಳದಲ್ಲಿ(Kerala) 12 ದಿನಗಳಾದರೆ ಉತ್ತರ ಪ್ರದೇಶದಲ್ಲಿ ಕೇವಲ ಎರಡು ದಿನಗಳೇಕೆ ಎಂದು ಪ್ರಶ್ನಿಸಿದ ಸಿಪಿಐ(ಎಂ) ವಿರುದ್ಧ ಕಾಂಗ್ರೆಸ್ ಕಿಡಿ ಕಾರಿದೆ.

ಸಿಪಿಐ(ಎಂ) ಕಾಂಗ್ರೆಸ್ ಪಕ್ಷವನ್ನು ಟೀಕಿಸಿ "ಭಾರತ್ ಜೋಡೋ ಅಥವಾ ಸೀಟ್ ಜೋಡೋ, 18 ದಿನಗಳು ಕೇರಳದಲ್ಲಿ ಮತ್ತು 2 ದಿನಗಳು ಉತ್ತರ ಪ್ರದೇಶದಲ್ಲಿ, ಬಿಜೆಪಿ-ಆರೆಸ್ಸೆಸ್(RSS) ವಿರುದ್ಧ ಹೋರಾಡುವ ವಿಚಿತ್ರ ವಿಧಾನಗಳು," ಎಂದು ಟ್ವೀಟ್ ಮಾಡಿತ್ತು.

ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್(Jairam Ramesh) "ಯಾತ್ರಾವನ್ನು ಹೀಗೇಕೆ ಯೋಜಿಸಲಾಯಿತು ಎಂಬ ಬಗ್ಗೆ ನಿಮ್ಮ ಹೋಂವರ್ಕ್ ಅನ್ನು ಸರಿಯಾಗಿ ಮಾಡಿ. ಮುಂಡುಮೋದಿಯ ನಾಡಿನಲ್ಲಿ ಬಿಜೆಪಿಯ ಟೀಮ್ ಆಗಿರುವ ಪಕ್ಷವೊಂದರಿಂದ ಬಾಲಿಶ ಟೀಕೆ" ಎಂದು  ಬರೆದಿದ್ದಾರೆ.

ರಾಹುಲ್ ಗಾಂಧಿ ಅವರು ಯಾತ್ರೆಯನ್ನು ಮುನ್ನಡೆಸುತ್ತಿದ್ದರೂ ಇದು ಪಕ್ಷದ ಕಾರ್ಯಕ್ರಮ, ಎಲ್ಲರೂ ಭಾಗಿಗಳು ಎಂದೂ ಅವರು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News