ಮಧ್ಯಪ್ರದೇಶ: ಮೂರೂವರೆ ವರ್ಷದ ಮಗುವಿನ ಮೇಲೆ ಶಾಲಾ ಬಸ್ ಚಾಲಕನಿಂದ ಅತ್ಯಾಚಾರ
ಭೋಪಾಲ್(ಮಧ್ಯಪ್ರದೇಶ): ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ನರ್ಸರಿಯಲ್ಲಿ ಓದುತ್ತಿದ್ದ ಮೂರೂವರೆ ವರ್ಷದ ಮಗುವಿನ ಮೇಲೆ ಶಾಲಾ ಬಸ್ ಚಾಲಕ ವಾಹನದೊಳಗೆ ಅತ್ಯಾಚಾರವೆಸಗಿದ್ದಾನೆ (A three-and-a-half-year-old nursery student was raped allegedly by her school bus driver inside the vehicle )ಎಂದು ಪೊಲೀಸ್ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
ಮಗುವಿನ ಪೋಷಕರ ಪ್ರಕಾರ ಕಳೆದ ಗುರುವಾರ ಘಟನೆ ನಡೆದಾಗ ವಾಹನದೊಳಗೆ ಇದ್ದ ಬಸ್ ಚಾಲಕ ಹಾಗೂ ಮಹಿಳಾ ಅಟೆಂಡರ್ ಅನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಶಾಲೆಯ ಆಡಳಿತ ಮಂಡಳಿಯು ಈ ಪೈಶಾಶಿಕ ಘಟನೆಯನ್ನು ಮುಚ್ಚಿಡಲು ಪ್ರಯತ್ನಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, ಶಾಲೆಯ ಆಡಳಿತದ ಪಾತ್ರದ ಬಗ್ಗೆ ತನಿಖೆ ನಡೆಸಲಾಗುವುದು ಹಾಗೂ ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಗರದ ಪ್ರಮುಖ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿರುವ ಮಗು ಬಸ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ.
ಮಗು ಮನೆಗೆ ಮರಳಿದ ನಂತರ, ಮಗುವಿನ ಬ್ಯಾಗ್‌ನಲ್ಲಿ ಇರಿಸಲಾಗಿದ್ದ ಸ್ಪೇರ್ ಸೆಟ್‌ನಿಂದ ಮಗುವಿನ ಬಟ್ಟೆಯನ್ನು ಯಾರೋ ಬದಲಾಯಿಸಿದ್ದನ್ನು ಮಗುವಿನ ತಾಯಿ ಗಮನಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಂತರ ತಾಯಿ ತನ್ನ ಮಗಳ ಕ್ಲಾಸ್ ಟೀಚರ್ ಹಾಗೂ ಶಾಲೆಯ ಪ್ರಾಂಶುಪಾಲರನ್ನು ವಿಚಾರಿಸಿದರು, ಆದರೆ ಇಬ್ಬರೂ ಮಗುವಿನ ಬಟ್ಟೆಯನ್ನು ಬದಲಾಯಿಸಿಲ್ಲ ಎಂದು ನಿರಾಕರಿಸಿದರು.
ನಂತರ ಮಗು ತನ್ನ ಜನನಾಂಗದಲ್ಲಿ ನೋವಿರುವ ಬಗ್ಗೆ ದೂರು ನೀಡಿತು. ಮಗುವಿನ ಪೋಷಕರು ಮಗುವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೌನ್ಸೆಲಿಂಗ್ ಮಾಡಿದ್ದು, ಬಸ್ ಚಾಲಕ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಹಾಗೂ ಬಟ್ಟೆ ಬದಲಿಸಿದ್ದಾನೆ ಎಂದು ಮಗು ತಿಳಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪೋಷಕರು ಅಧಿಕಾರಿಗಳಿಗೆ ದೂರು ನೀಡಲು ಮರುದಿನ ಶಾಲೆಗೆ ಹೋದರು ಹಾಗೂ ಮಗು ಕೃತ್ಯ ಎಸಗಿದ ಚಾಲಕನನ್ನು ಗುರುತಿಸಿದೆ ಎಂದು ಅಧಿಕಾರಿ ಹೇಳಿದರು.