ಸಾಮಾನ್ಯ ಭದ್ರತೆಯನ್ನು ರಕ್ಷಿಸಲು ಚೀನಾ ಬದ್ಧ: ಕ್ಸಿಜಿಂಪಿಂಗ್

Update: 2022-09-13 17:04 GMT

ಬೀಜಿಂಗ್, ಸೆ.13: ಕಝಕ್‌ಸ್ತಾನದೊಂದಿಗೆ ಸಾಮಾನ್ಯ ಭದ್ರತೆಯನ್ನು ಉಳಿಸಿಕೊಳ್ಳಲು ಚೀನಾ ಬದ್ಧವಾಗಿದೆ ಎಂದು ಚೀನಾದ ಅಧ್ಯಕ್ಷ ಕ್ಸಿಜಿಂಪಿಂಗ್ ಮಂಗಳವಾರ ಹೇಳಿದ್ದಾರೆ.

ಈ ವಾರ ಕಝಕ್‌ಸ್ತಾನ ಮತ್ತು ಉಜ್ಬೇಕಿಸ್ತಾನಕ್ಕೆ ಕ್ಸಿಜಿಂಪಿಂಗ್ ಭೇಟಿ ನೀಡಲಿದ್ದು ಸುಮಾರು 2 ವರ್ಷದ ಬಳಿಕ ಅವರು ವಿದೇಶಕ್ಕೆ ನೀಡುತ್ತಿರುವ ಪ್ರಥಮ ಭೇಟಿ ಇದಾಗಿದೆ.

ಉಜ್ಬೇಕಿಸ್ತಾನದಲ್ಲಿ ನಡೆಯುವ ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ಕಾನೂನು ಜಾರಿ, ಭದ್ರತೆ ಮತ್ತು ರಕ್ಷಣೆ ಕ್ಷೇತ್ರದಲ್ಲಿ ಕಝಕ್‌ಸ್ತಾನದೊಂದಿಗೆ ಸಹಕಾರವನ್ನು ಗಾಢಗೊಳಿಸಲು ಚೀನಾ ಆಸಕ್ತವಾಗಿದೆ. ಮಾದಕ ವಸ್ತು ಕಳ್ಳಸಾಗಣೆ ತಡೆಯಲು ಮತ್ತು ಅಂತರಾಷ್ಟ್ರೀಯ ಸಂಘಟಿತ ಅಪರಾಧವನ್ನು ಮಟ್ಟಗೊಳಿಸಲು ಎರಡೂ ದೇಶಗಳು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ ಎಂದವರು ಹೇಳಿದ್ದಾರೆ. ಪ್ರಾದೇಶಿಕ ಭದ್ರತಾ ಪರಿಸ್ಥಿತಿಯನ್ನು ಹಾಳು ಮಾಡುವ ಯಾವುದೇ ಶಕ್ತಿಯ ವಿರುದ್ಧ ಉಭಯ ದೇಶಗಳು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ಅಫ್ಘಾನ್ ಸಮಸ್ಯೆಯನ್ನು ಪರಿಹರಿಸುವಲ್ಲಿ ಉಜ್ಬೇಕಿಸ್ತಾನ ವಿಶಿಷ್ಟ ಪಾತ್ರವನ್ನು ಹೊಂದಿದೆ ಎಂದು ಕ್ಸಿಜಿಂಪಿಂಗ್ ಹೇಳಿರುವುದಾಗಿ ಸಿಸಿಟಿವಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News