×
Ad

ಗುರುಗ್ರಾಮದ ಲೀಲಾ ಹೊಟೇಲ್‌ಗೆ ಹುಸಿ ಬಾಂಬ್ ಬೆದರಿಕೆ

Update: 2022-09-13 22:54 IST
photo grace :NDTV

ಗುರುಗ್ರಾಮ, ಸೆ. ೧೩: ಇಲ್ಲಿನ ಆ್ಯಂಬಿಯನ್ಸ್ ಮಾಲ್‌ಲ್ಲಿರುವ ಲೀಲಾ ಹೊಟೇಲ್‌ಗೆ ಬುಧವಾರ ಬಾಂಬ್ ಬೆದರಿಕೆ ಕರೆ ಬಂದಿದ್ದು, ಅನಂತರ ಅದು ಹುಸಿ ಬಾಂಬ್ ಬೆದರಿಕೆ ಕರೆ ಎಂಬುದು ದೃಢಪಟ್ಟಿದೆ. ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಹೊಟೇಲ್‌ನ ಆವರಣದಲ್ಲಿ ಶೋಧ ನಡೆಸಿದಾಗ ಯಾವುದೇ ಸಂಶಯಾಸ್ಪದ ವಸ್ತು ಪತ್ತೆಯಾಗಿಲ್ಲ. ಮಾನಸಿಕ ಅಸ್ವಸ್ಥನೋರ್ವ ಈ ಹುಸಿ ಬಾಂಬ್ ಕರೆ ಮಾಡಿದ್ದ ಎಂಬುದು ಅನಂತರ ತಿಳಿದು ಬಂದಿದೆ.

ಸೆಕ್ಟರ್ 47ರಲ್ಲಿರುವ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ಮಾನಸಿಕ ಅಸ್ವಸ್ಥ ವ್ಯಕ್ತಿ ಈ ಕರೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ‘‘ಲೀಲಾ ಹೊಟೇಲ್ ಇಂದು ಬೆಳಗ್ಗೆ ಬಾಂಬ್ ಬೆದರಿಕೆ ಕರೆ ಸ್ವೀಕರಿಸಿತು. ಹೊಟೇಲ್‌ನ ಆವರಣದಲ್ಲಿ ಶ್ವಾನ ದಳದಿಂದ ಶೋಧ ನಡೆಸಲಾಯಿತು. ಬಾಂಬ್ ನಿಷ್ಕ್ರಿಯ ದಳಕ್ಕೆ ಕೂಡ ಕರೆ ನೀಡಲಾಗಿತ್ತು. ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ’’ ಎಂದು ಎಸಿಪಿ ವಿಕಾಶ್ ಕೌಶಿಕ್ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News