ಪಾಕಿಸ್ತಾನದ ಮಾಜಿ ಐಸಿಸಿ ಅಂಪೈರ್ ಅಸದ್ ರವೂಫ್ ನಿಧನ

Update: 2022-09-15 05:11 GMT
Photo:twitter

ಕರಾಚಿ: ಪಾಕಿಸ್ತಾನದ ಮಾಜಿ ಐಸಿಸಿ ಅಂಪೈರ್ ಅಸದ್ ರವೂಫ್ (Former Pakistani umpire Asad Rauf)ಅವರು ಲಾಹೋರ್‌ನಲ್ಲಿ ಹೃದಯ ಸ್ತಂಭನದಿಂದ ಸಾವನ್ನಪ್ಪಿದರು. ಅವರಿಗೆ 66 ವರ್ಷ ವಯಸ್ಸಾಗಿತ್ತು.

ರವೂಫ್  ಅವರು  2006 ರಿಂದ 2013 ರವರೆಗೆ ಐಸಿಸಿ ಎಲೈಟ್ ಪ್ಯಾನೆಲ್‌ನ ಭಾಗವಾಗಿದ್ದರು.

"ಅಸದ್ ರವೂಫ್ ಅವರ ನಿಧನದ ಬಗ್ಗೆ ಕೇಳಿ ದುಃಖವಾಯಿತು. ಅವರು ಉತ್ತಮ ಅಂಪೈರ್ ಆಗಿದ್ದರು.  ಮಾತ್ರವಲ್ಲದೆ ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದರು. ಅವರ ಅಗಲಿಕೆಗಾಗಿ ಅವರ ಕುಟುಂಬಕ್ಕೆ ಸಹಾನುಭೂತಿ ವ್ಯಕ್ತಪಡಿಸುವೆ ” ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮೀಜ್ ರಾಝಾ ಟ್ವೀಟ್ ಮಾಡಿದ್ದಾರೆ.

ರವೂಫ್ 2000 ರಲ್ಲಿ ಏಕದಿನ ಕ್ರಿಕೆಟ್ ಹಾಗೂ 2005 ರಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಬಾರಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು. 2006 ರಲ್ಲಿ, ಅವರು ICC ಯ ಎಲೈಟ್ ಪ್ಯಾನೆಲ್‌ನಲ್ಲಿ ಸ್ಥಾನ ಪಡೆದರು. 2013 ರವರೆಗೆ ಈ ಪ್ಯಾನಲ್ ನಲ್ಲಿದ್ದರು.

ರವೂಫ್ ಅವರು  64 ಟೆಸ್ಟ್‌ಗಳು, 139 ಏಕದಿನಗಳು, 28 ಟಿ-20ಗಳು ಮತ್ತು 11 ಮಹಿಳಾ ಟಿ-20ಗಳಲ್ಲಿ  ಅಂಪೈರ್ ಅಥವಾ ಟಿವಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ಐಪಿಎಲ್ ಪಂದ್ಯಗಳನ್ನು ಒಳಗೊಂಡಂತೆ 40 ಪ್ರಥಮ ದರ್ಜೆ ಪಂದ್ಯಗಳು, 26 ಲಿಸ್ಟ್ ಎ ಪಂದ್ಯಗಳು ಹಾಗೂ  ಒಟ್ಟಾರೆ 89 ಟಿ 20 ಪಂದ್ಯಗಳಲ್ಲಿ ಅಂಪೈರ್ ಆಗಿ ಕೆಲಸ ಮಾಡಿದ್ದಾರೆ.

ರವೂಫ್ ಅವರು ದೇಶೀಯ ಕ್ರಿಕೆಟ್ ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಯಶಸ್ವಿ ಯಾಗಿದ್ದರು. ರವೂಫ್  71 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 3,423 ರನ್ ಗಳಿಸಿದ್ದಾರೆ. ಅವರು 40 ಲಿಸ್ಟ್ ಎ ಪಂದ್ಯಗಳನ್ನು ಆಡಿ  611 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News