×
Ad

ಕೆನಡಾ: ಹಿಂದೂ ದೇವಾಲಯದ ಗೋಡೆಗಳ ಮೇಲೆ ಭಾರತ ವಿರೋಧಿ ಬರಹ; ಭಾರತ ಖಂಡನೆ

Update: 2022-09-15 12:38 IST

ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿರುವ  ಪ್ರಮುಖ ಹಿಂದೂ ದೇವಾಲಯದ ಗೋಡೆಗಳ ಮೇಲೆ  ಕೆನಡಾದ ''ಖಲಿಸ್ತಾನಿ ಉಗ್ರರು'' ಭಾರತ ವಿರೋಧಿ ಘೋಷಣೆಗಳನ್ನು ಬರೆದು ವಿರೂಪಗೊಳಿಸಿದ್ದಾರೆಂದು ( Hindu temple has been defaced by ''Canadian Khalistani extremists '') ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಘಟನೆಯನ್ನು ಖಂಡಿಸಿರುವ ಕೆನಡಾದ  ಭಾರತೀಯ ಹೈಮಿಷನ್ ತಪ್ಪಿತಸ್ಥರ  ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದೆ.

ಟೊರೊಂಟೊದ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರದಲ್ಲಿ ವಿರೂಪ  ಘಟನೆ ಯಾವಾಗ ನಡೆದಿದೆ ಎಂದು ಇನ್ನೂ ತಿಳಿದುಬಂದಿಲ್ಲ.

"ಭಾರತ ವಿರೋಧಿ ಗೀಚುಬರಹದ ಮೂಲಕ ಟೊರೊಂಟೊ BAPS ಸ್ವಾಮಿನಾರಾಯಣ ಮಂದಿರವನ್ನು ವಿರೂಪಗೊಳಿಸಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಘಟನೆಯ ಬಗ್ಗೆ ತನಿಖೆ ನಡೆಸಲು ಹಾಗೂ  ಅಪರಾಧಿಗಳ ಮೇಲೆ ತ್ವರಿತ ಕ್ರಮ ಕೈಗೊಳ್ಳಲು ಕೆನಡಾದ ಅಧಿಕಾರಿಗಳಿಗೆ ವಿನಂತಿಸಿದ್ದೇವೆ’’ ಎಂದು ಭಾರತೀಯ ಹೈಕಮಿಷನ್ ಬುಧವಾರ ಟ್ವೀಟ್ ಮಾಡಿದೆ.

“ಕೆನಡಾದ ಖಲಿಸ್ತಾನಿ ಉಗ್ರರು ಟೊರೊಂಟೊದ ಬಿಪಿಎಸ್ ಸ್ವಾಮಿ ನಾರಾಯಣ ಮಂದಿರವನ್ನು ವಿರೂಪಗೊಳಿಸಿರುವುದನ್ನು ಎಲ್ಲರೂ ಖಂಡಿಸಬೇಕು. ಕೇವಲ ಇದೊಂದು ಘಟನೆಯಷ್ಟೇ ಅಲ್ಲ ಕೆನಡಾದ ಹಿಂದೂ ದೇಗುಲಗಳು ಇತ್ತೀಚೆಗೆ ಈ ರೀತಿಯ ದ್ವೇಷದ ದಾಳಿಗೆ ತುತ್ತಾಗುತ್ತಿವೆ. ಹಿಂದೂ ಕೆನಡಿಯನ್ನರು ಈ ಕುರಿತು ಆತಂಕಕ್ಕೀಡಾಗಿದ್ದಾರೆ’’ ಎಂದು ಕೆನಡಾದ ಸಂಸತ್ ಸದಸ್ಯ ಚಂದ್ರ ಆರ್ಯ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News