ಸ್ವೀಡನ್ ಪ್ರಧಾನಿ ರಾಜೀನಾಮೆ
ಸ್ಟಾಕ್‍ಹೋಂ, ಸೆ.15: ಸಂಸತ್‍ಗೆ ನಡೆದ ಚುನಾವಣೆಯಲ್ಲಿ ಹಿನ್ನಡೆಯಾಗಿರುವ ಹಿನ್ನೆಲೆಯಲ್ಲಿ ಸ್ವೀಡನ್‍ನ ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ಪ್ರಧಾನಮಂತ್ರಿಮ್ಯಾಗ್ದಲಿನಾ ಆ್ಯಂಡರ್ಸನ್ ನ ಗುರುವಾರ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ರಾಷ್ಟ್ರೀಯವಾದಿ, ವಲಸೆ ವಿರೋಧಿ ಪಕ್ಷವನ್ನು ಒಳಗೊಂಡಿರುವ ಬಲಪಂಥೀಯ ಬಣ ಸಂಸದೀಯ ಚುನಾವಣೆಯಲ್ಲಿ ಅಲ್ಪಬಹುಮತ ಗಳಿಸಿದೆ. 349 ಸದಸ್ಯ ಬಲದ ಸಂಸತ್ತಿನಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಬಣ 173, ಬಲಪಂಥೀಯ ಬಣ 176 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ.
ಸಂಸತ್‍ನ ಸ್ಪೀಕರ್ ಆಂಡ್ರಿಯಾಸ್ ನಾರ್ಲೆನ್‍ರನ್ನು ಭೇಟಿಯಾದ ಆಂಡರ್ಸನ್, ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸಿದರು. ನೂತನ ಸರಕಾರ ರಚನೆಯಾಗುವವರೆಗೆ ಉಸ್ತುವಾರಿ ಪ್ರಧಾನಿಯಾಗಿ ಕಾರ್ಯನಿರ್ವಹಿಸುವಂತೆ ಸ್ಪೀಕರ್ ಸೂಚಿಸಿದರು. ಒಂದು ವರ್ಷದ ಹಿಂದೆಯಷ್ಟೇ ಸ್ವೀಡನ್ ಪ್ರಧಾನಿಯಾಗಿ ನೇಮಕಗೊಂಡಿದ್ದ ಮ್ಯಾಗ್ದಲೀನಾ ಆಂಡರ್ಸನ್ ಈ ಹುದ್ದೆಗೇರಿದ ಸ್ವೀಡನ್‍ನ ಪ್ರಥಮ ಮಹಿಳೆ ಎಂಬ ಹಿರಿಮೆಗೆ ಪಾತ್ರವಾಗಿದ್ದರು.