ರಶ್ಯ-ಭಾರತ ಸಂಬಂಧಕ್ಕೆ ಗೌರವ: ಫ್ರಾನ್ಸ್

Update: 2022-09-15 16:25 GMT

ಪ್ಯಾರಿಸ್, ಸೆ.15: ರಶ್ಯದೊಂದಿಗೆ ಇಂಧನ ಹಾಗೂ ಇತರ ಕ್ಷೇತ್ರಗಳಲ್ಲಿ ಭಾರತ ಹೊಂದಿರುವ ದ್ವಿಪಕ್ಷೀಯ ಸಂಬಂಧದ ಬಗ್ಗೆ ಫ್ರಾನ್ಸ್‍ಗೆ ಅರಿವಿದೆ ಮತ್ತು ಇದನ್ನು ಗೌರವಿಸುತ್ತದೆ ಎಂದು ಫ್ರಾನ್ಸ್‍ನ ವಿದೇಶಾಂಗ ಸಚಿವೆ ಕ್ಯಾಥರಿನ್ ಕೊಲೊನ್ನ ಗುರುವಾರ ಹೇಳಿದ್ದಾರೆ.

ರಶ್ಯವು ಭಾರತಕ್ಕೆ ರಕ್ಷಣಾ ಯಂತ್ರಾಂಶದ ಅತೀ ದೊಡ್ಡ ವಿದೇಶಿ ಪೂರೈಕೆದಾರನಾಗಿದ್ದು, ಉಕ್ರೇನ್ ಯುದ್ಧದ ಬಳಿಕ ರಶ್ಯದಿಂದ ಕಚ್ಛಾತೈಲ ಮತ್ತು ಕಲ್ಲಿದ್ದಲಿನ ಆಮದು ಪ್ರಮಾಣ ಹೆಚ್ಚಿದೆ. `ರಶ್ಯಕ್ಕೆ ಸಂಬಂಧಿಸಿದಂತೆ ನಮ್ಮ ಸಂಬಂಧಗಳ ವ್ಯತ್ಯಾಸ ನಮಗೆ ತಿಳಿದಿದೆ. ರಶ್ಯದೊಂದಿಗಿನ ಭಾರತದ  ಈ ಹಿಂದಿನ ಮತ್ತು ಪ್ರಸ್ತುತ ಸಂಬಂಧಗಳ ಇತಿಹಾಸ ನಮಗೆ ತಿಳಿದಿದೆ. ಕೆಲವು ಸಂಬಂಧಗಳೊಂದಿಗೆ ಮುಂದುವರಿಯುವ ಭಾರತದ ನಿರ್ಧಾರವನ್ನು ನಾವು ಗೌರವಿಸುತ್ತೇವೆ' ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News