×
Ad

ಜಪಾನ್ ಮಾಜಿ ಪ್ರಧಾನಿಯ ಅಂತ್ಯಕ್ರಿಯೆಗೆ ನಿಯೋಗ ರವಾನೆ: ತೈವಾನ್

Update: 2022-09-15 22:00 IST

ತೈಪೆ, ಸೆ.15: ಸೆಪ್ಟಂಬರ್ 27ರಂದು ನಡೆಯಲಿರುವ ಜಪಾನ್ ಮಾಜಿ ಪ್ರಧಾನಿ ಶಿಂಝೊ ಅಬೆ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ತೈವಾನ್‍ನ 3 ಸದಸ್ಯರ ನಿಯೋಗ ಪಾಲ್ಗೊಳ್ಳಲಿದೆ ಎಂದು ತೈವಾನ್ ಅಧ್ಯಕ್ಷರ ಕಚೇರಿ ಹೇಳಿದೆ.

ಸಂಸತ್‍ನ ಮಾಜಿ ಸ್ಪೀಕರ್ ವಾಂಗ್ ಜಿನ್‍ಪಿಂಗ್, ಮಾಜಿ ಪ್ರೀಮಿಯರ್ ಫ್ರಾಂಕ್ ಹಸೇಹ್, ಜಪಾನ್ ವ್ಯವಹಾರಕ್ಕೆ ಸಂಬಂಧಿಸಿದ ತೈವಾನ್‍ನ ಸಂಸ್ಥೆಯ ಮುಖ್ಯಸ್ಥ ಸುಜಿಯಾ- ಚ್ಯುವಾನ್ ಅವರು ನಿಯೋಗದ ಸದಸ್ಯರಾಗಿರುತ್ತಾರೆ ಎಂದು ಹೇಳಿಕೆ ತಿಳಿಸಿದೆ. ಆದರೆ ತೈವಾನ್ ತನ್ನ ಭೂಪ್ರದೇಶದ ಅಂಗ ಎಂದು ವಾದಿಸುತ್ತಿರುವ ಚೀನಾದಿಂದ  ಈ ವಿಷಯದಲ್ಲಿ ಭಾರೀ ವಿರೋಧ ಎದುರಾಗುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News