×
Ad

ಚೀನಾದ ಚಾಂಗ್ಶಾ ನಗರದ ಗಗನಚುಂಬಿ ಕಟ್ಟಡದಲ್ಲಿ ಭಾರೀ ಬೆಂಕಿ

Update: 2022-09-16 14:53 IST
Photo:twitter

ಬೀಜಿಂಗ್: ಮಧ್ಯ ಚೀನಾದ ಚಾಂಗ್ಶಾ ನಗರದ ಗಗನಚುಂಬಿ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ರಾಜ್ಯ ಮಾಧ್ಯಮ ಶುಕ್ರವಾರ ವರದಿ ಮಾಡಿದೆ. , ಸಾವುನೋವುಗಳ ಸಂಖ್ಯೆ "ಸದ್ಯಕ್ಕೆ ತಿಳಿದುಬಂದಿಲ್ಲ" ಎಂದು ಅದು ಹೇಳಿದೆ.

"ಘಟನಾ ಸ್ಥಳದಿಂದ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ ಮತ್ತು ಕಟ್ಟಡದ ಹಲವಾರು ಡಝನ್ ಮಹಡಿಗಳು ಹೊತ್ತಿ ಉರಿಯುತ್ತಿವೆ" ಎಂದು ರಾಜ್ಯ ಪ್ರಸಾರಕ ಸಿಸಿಟಿವಿ ವರದಿ ಮಾಡಿದೆ.

"ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಮತ್ತು ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯವನ್ನು ಆರಂಭಿಸಿದ್ದಾರೆ" ಎಂದು ತಿಳಿದುಬಂದಿದೆ.

ಸರಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿ ಚೀನಾ ಟೆಲಿಕಾಂನ ಕಚೇರಿಯನ್ನು ಹೊಂದಿರುವ ಎತ್ತರದ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News