ಕಾಪು ಜಮೀಯ್ಯತುಲ್ ಫಲಾಹ್ ಮಹಾಸಭೆ

Update: 2022-09-16 10:57 GMT

ಕಾಪು, ಸೆ.16: ಜಮೀಯ್ಯತುಲ್ ಫಲಾಹ್ ಕಾಪು ಘಟಕದ ಮಹಾಸಭೆಯು ಇತ್ತೀಚೆಗೆ ಕಾಪು ಸಿಟಿ ಸೆಂಟರ್‌ನ ಘಟಕದ ಕಚೇರಿಯಲ್ಲಿ ಜರುಗಿತು.

 ಕೇಂದ್ರ ಕಚೇರಿಯಿಂದ ಪರಿವೀಕ್ಷಕರಾಗಿ ಉಡುಪಿ ಘಟಕದ ಅಧ್ಯಕ್ಷ ಕಾಸಿಮ್ ಬಾರ್ಕೂರ್ ಆಗಮಿಸಿದ್ದರು. ಕಳೆದ ಅವಧಿಯ ವರದಿಯನ್ನು ಕಾರ್ಯದರ್ಶಿ ಸಾಬೀರ್ ಅಲಿ ಮಂಡಿಸಿದರು. ಲೆಕ್ಕ ಪತ್ರವನ್ನು ಕೋಶಾಧಿಕಾರಿ ಶಬೀಹ್ ಅಹ್ಮದ್ ಕಾಝಿ ಮಂಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಪು ಘಟಕದ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಸಾಹೇಬ್, ಈ ಅವಧಿಯಲ್ಲಿ ಸಾರ್ವಜನಿಕರ ಉಚಿತ ಸೇವೆಗಾಗಿ ಬೆಳಪು ಗ್ರಾಮದಲ್ಲಿ ದಾನಿಯಾದ ಮುಹಮ್ಮದ್ ಅಸ್ಲಮ್ ಕಾಝಿಯವರ ನೆರವಿನಿಂದ ಕಟ್ಟಡ ನಿರ್ಮಿಸಿ, ಅಲ್ ಫಲಾಹ್ ಕ್ಲಿನಿಕ್ ತೆರೆಯಲಾಯಿತು. ಇಲ್ಲಿ ದಿನಂಪ್ರತಿ ಹಲವು ರೋಗಿಗಳು ಬಂದು ಉಚಿತ ಚಿಕಿತ್ಸೆ ಮತ್ತು ಔಷಧಿ ಪಡೆದುಕೊಂಡು ಹೋಗುತ್ತಿದ್ದಾರೆ. ಹಾಗೂ ಈ ಸಾಲಿನಲ್ಲಿ ರಮಝಾನ್ ಕಿಟ್ ವಿತರಣೆ, ಫಿತ್ರ್ ಝಕಾತ್ ವಿತರಣೆ, ವಿದ್ಯಾರ್ಥಿ ವೇತನ ವಿತರಿಸಲಾಗಿದ್ದು, ಇದಕ್ಕೆ ನೆರವು ನೀಡಿದ ಜೆಎಫ್ ನ ಎಲ್ಲಾ ಸದಸ್ಯರು ಮತ್ತು ಹಿತೈಷಿಗಳು ಮುಂದಿನ ದಿನಗಳಲ್ಲೂ ಸಹಕರಿಸಬೇಕೆಂದು ವಿನಂತಿಸಿದರು.

 ಜೆಎಫ್ ನಿಯಮಾವಳಿಯಂತೆ ಮುಂದಿನ ಸಾಲಿನಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ ಎಂದು ತಿಳಿಸಿದರು. ಅನ್ವರ್ ಅಲಿ ಕಾಪು ಕಿರಾಅತ್ ಪಠಿಸಿದರು. ಸಾಬೀರ್ ಅಲಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News