BIT, BEADS ಮತ್ತು BIES ಗಳಿಂದ 'ಅಂತರರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ' ಆಚರಣೆ

Update: 2022-09-17 16:31 GMT

ಮಂಗಳೂರು, ಸೆ. 17: BIT (ಬ್ಯಾರೀಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ), BEADS (ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್) ಮತ್ತು BIES (ಬ್ಯಾರೀಸ್ ಇನ್ಸ್‌ಟಿಟ್ಯೂಟ್ ಆಫ್ ಎಮರ್ಜಿಂಗ್ ಸಯನ್ಸಸ್) ಸಮೂಹ ಸಂಸ್ಥೆಗಳು  ಸೆ.17ರಂದು 'ಅಂತರರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ' ದೊಂದಿಗೆ ವಿಶ್ವ ಹಸಿರು ಕಟ್ಟಡ ಸಪ್ತಾಹವನ್ನು ಆಚರಿಸಿದವು.

17ನೇ ಸೆಪ್ಟೆಂಬರ್ 2022ರಂದು ಅಂತರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನವಾಗಿ ಉಳ್ಳಾಲ ಬೀಚ್ ನಲ್ಲಿ  ʼಸ್ವಚ್ಛ ಸಾಗರ್, ಸುರಕ್ಷಿತ್ ಸಾಗರ್ʼ ಅನ್ನು ಆಯೋಜಿಸುವುದರ ಮೂಲಕ ಮಂಗಳೂರಿನ ವಿಶ್ವ ಹಸಿರು ಕಟ್ಟಡ ಸಪ್ತಾಹವನ್ನು ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (BIT), ಬ್ಯಾರೀಸ್ ಎನ್ವಿರೋ-ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (BEADS), ಮತ್ತು ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸಸ್ (BIES)  ಗುರುತಿಸಿವೆ.

ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರತಿಯೊಂದು ಕ್ಷೇತ್ರದಲ್ಲಿ ನಾಯಕರನ್ನು ರೂಪಿಸುವುದರೊಂದಿಗೆ ಪ್ರಗತಿಶೀಲ, ಶಾಂತಿಯುತ ಹಸಿರು ಜಗತ್ತಿಗೆ ಗಣನೀಯ ಕೊಡುಗೆ ನೀಡುವುದು ಬ್ಯಾರಿಸ್ ಗ್ರೂಪ್‌ನ ಯೋಜನೆಯಾಗಿದೆ. ಅದರ ಕ್ಯಾಂಪಸ್ ಬ್ಯಾರೀಸ್ ಗ್ರೂಪ್‌ನ ಸುಸ್ಥಿರ ಹಸಿರು ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಕಲಿಕೆಯ ಭವಿಷ್ಯದ ಪರಿಕಲ್ಪನೆಯನ್ನು ಪರಿಚಯಿಸುತ್ತದೆ, ಅಲ್ಲಿ ಪ್ರಕೃತಿ ಮತ್ತು ಪೋಷಣೆಯು ಒಟ್ಟಿಗೆ ಸೇರಿಕೊಂಡು ಯುವ ಮನಸ್ಸುಗಳನ್ನು ಸುಸ್ಥಿರ  ಹಸಿರು ನಿರ್ಮಾಣದ  ಪ್ರತಿಪಾದಕರು ಮತ್ತು ಜಾಗತಿಕ ಪ್ರಪಂಚದ ಪರಿಸರ ಪ್ರಜ್ಞೆಯ ನಾಯಕರಾಗಲು ಪ್ರೇರೇಪಿಸುತ್ತದೆ.

ಪ್ರಪಂಚವು ಹವಾಮಾನ ಬದಲಾವಣೆಯ ನಿರಂತರ ಬೆದರಿಕೆಗೆ ಒಳಗಾಗಿದ್ದು, ಪದೇಪದೇ ಘಟಿಸುತ್ತಿರುವ ತೀವ್ರವಾದ ಬರ, ಬಿರುಗಾಳಿಗಳು, ಶಾಖದ ಅಲೆಗಳು, ಏರುತ್ತಿರುವ ಸಮುದ್ರ ಮಟ್ಟಗಳು, ಕರಗುವ ಹಿಮನದಿಗಳು ಮತ್ತು ಬೆಚ್ಚಗಾಗುವ ಸಾಗರಗಳು ನೇರವಾಗಿ ಪ್ರಾಣಿಗಳಿಗೆ ಹಾನಿ ಮಾಡುತ್ತಿವೆ. ಅದು ಅವುಗಳು ವಾಸಿಸುವ ಸ್ಥಳಗಳನ್ನು ನಾಶಮಾಡುತ್ತಿವೆ. ಮಾತ್ರವಲ್ಲ ಜನರ ಜೀವನೋಪಾಯಗಳು ಮತ್ತು ಸಮುದಾಯಗಳ ಮೇಲೆ ವಿನಾಶವನ್ನು ಉಂಟುಮಾಡಬಹುದು. ಹವಾಮಾನ ಬದಲಾವಣೆಯು ಹದಗೆಟ್ಟಂತೆ, ಅಪಾಯಕಾರಿ ಹವಾಮಾನ ಘಟನೆಗಳು ಹೆಚ್ಚು ತೀವ್ರವಾಗುತ್ತಿವೆ. ಈ ಕಾರಣದಿಂದಾಗಿ ಭೂಮಿಯನ್ನು ಉಳಿಸುವ ಮಾನವರ ಜವಾಬ್ದಾರಿಗಳು ಹಲವಾರು ಪಟ್ಟು ಹೆಚ್ಚಾಗಿವೆ. ಶಕ್ತಿಯನ್ನು ಮತ್ತು ಮೂಲಸೌಕರ್ಯಗಳನ್ನು ಉಳಿಸುವ ತಂತ್ರಜ್ಞಾನಗಳ ಬಳಕೆ, ಶಕ್ತಿ ಸಂರಕ್ಷಣೆ; ನವೀಕರಿಸಬಹುದಾದ ಇಂಧನ ಮೂಲಗಳನ್ನು ಹುಡುಕುವ ಪ್ರಯತ್ನಗಳು, ಹಸಿರು ಕಟ್ಟಡಗಳು ಮತ್ತು ಕಟ್ಟಡಗಳಲ್ಲಿ ಅಂತರ್ಗತವಾಗಿರುವ ಅನೇಕ ಸಸ್ಯಗಳು / ಮರಗಳು, ಜಾಗತಿಕ ತಾಪಮಾನ ಇಳಿಕೆಗೆ ಹೊಂದಿಕೊಳ್ಳುವಿಕೆ ಅಥವಾ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ನೀತಿ, ಇತ್ಯಾದಿ; ಭವಿಷ್ಯದಲ್ಲಿ ಹೆಚ್ಚಾಗಬೇಕು ಎಂಬ ನಿಟ್ಟಿನಿಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸಮುದ್ರ ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸಾಗರದಲ್ಲಿನ ಕಸ ಮತ್ತು ಪ್ಲಾಸ್ಟಿಕ್ ಅನ್ನು ಕಡಿಮೆ ಮಾಡಲು ಕೊಡುಗೆ ನೀಡುವುದು ಬೀಚ್ ಸ್ವಚ್ಛತೆಯ ಗುರಿಯಾಗಿದೆ. ಸಂಸ್ಥೆಯ ವಿದ್ಯಾರ್ಥಿಗಳು ಉಳ್ಳಾಲ ಬೀಚ್‌ನಲ್ಲಿ ಪರಿಸರ ಸ್ವಚ್ಛತೆ ಕುರಿತ ಬ್ಯಾನರ್‌ಗಳನ್ನು ಪ್ರದರ್ಶಿಸಿ, ಘೋಷಣೆಗಳೊಂದಿಗೆ ಜನಜಾಗೃತಿ ಮೂಡಿಸಿದರು. ಭಾಗವಹಿಸಿದವರಿಗೆ ಕೈಗವಸು, ಸ್ಯಾನಿಟೈಸರ್ ಮತ್ತು ಕ್ಲೀನಿಂಗ್ ಬ್ಯಾಗ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು  ಬ್ಯಾರಿಸ್ ಗ್ರೂಪ್ ನ Director ಅಬೂಬಕ್ಕರ್ ಸಿದ್ದೀಕ್ ಬ್ಯಾರಿ ಉದ್ಘಾಟಿಸಿದರು. BIT, BEADS ಮತ್ತು BIES ನ ಪ್ರಾಂಶುಪಾಲರು ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಸಿಬ್ಬಂದಿ ಮತ್ತು ಬೋಧಕೇತರ ಸಿಬ್ಬಂದಿಗಳೊಂದಿಗೆ ಬ್ಯಾರೀಸ್ ಗ್ರೂಪ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳೊಂದಿಗೆ ಉಳ್ಳಾಲ ಕಡಲತೀರವನ್ನು ಸ್ವಚ್ಛಗೊಳಿಸಲು ಕೈಜೋಡಿಸಿದರು.

ಇದೇ ಸಂದರ್ಭದಲ್ಲಿ BIT ವತಿಯಿಂದ ಗಿಡ ನೆಡುವ ಕಾರ್ಯಕ್ರಮ, ಹಸಿರು ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಶ್ವ ಗ್ರೀನ್ ಬಿಲ್ಡಿಂಗ್ ಸಪ್ತಾಹದ ಅಂಗವಾಗಿ BIT ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಸೆಪ್ಟೆಂಬರ್ 14ರಂದು  ಪಾವೂರು ಸರಕಾರಿ ಪ್ರೌಢ ಶಾಲೆಯಲ್ಲಿ ನೀರು ಸಂರಕ್ಷಣೆ ಹಾಗು ತ್ಯಾಜ್ಯ ನಿರ್ವಹಣೆ ಕುರಿತು ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News