×
Ad

ಕೋವಿಡ್ ಸೋಂಕು: ಆಸ್ಟ್ರೇಲಿಯಾ ಸರಣಿಯಿಂದ ಮೊಹಮ್ಮದ್ ಶಮಿ ಹೊರಗೆ

Update: 2022-09-18 08:17 IST
ಮೊಹಮ್ಮದ್ ಶಮಿ

ಹೊಸದಿಲ್ಲಿ: ಅಂತರರಾಷ್ಟ್ರೀಯ ಟಿ20 ಕಣಕ್ಕೆ ಭಾರತದ ಖ್ಯಾತ ವೇಗದ ಬೌಲರ್ ಮೊಹಮ್ಮದ್ ಶಮಿಯವರ ಪುನರಾಗಮನ ಮತ್ತಷ್ಟು ವಿಳಂಬವಾಗಲಿದೆ. ಕೋವಿಡ್-19 (COVID 19) ಸೋಂಕು ಪರೀಕ್ಷೆ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಮೊಹಾಲಿಯಲ್ಲಿ ಈ ತಿಂಗಳ 20ರಂದು ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಶಮಿ ಪಾಲ್ಗೊಳ್ಳುತ್ತಿಲ್ಲ.

ಇವರ ಸ್ಥಾನವನ್ನು ಉಮೇಶ್ ಯಾದವ್ ತುಂಬಲಿದ್ದಾರೆ. ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ಯಾದವ್ ಇದೀಗ ಚೇತರಿಸಿಕೊಂಡಿದ್ದಾರೆ.‌

"ಹೌದು; ಕೋವಿಡ್-19 ಪರೀಕ್ಷೆಯಲ್ಲಿ ಶಮಿ ಅವರಿಗೆ ಪಾಸಿಟಿವ್ ವರದಿ ಬಂದಿದೆ. ಆದರೆ ಸೌಮ್ಯಸ್ವರೂಪದ ರೋಗಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಆತಂಕಪಡುವ ಅಗತ್ಯ ಇಲ್ಲ. ಆದರೆ ಅವರು ಐಸೊಲೇಶನ್‍ನಲ್ಲಿ ಇರಬೇಕಾಗುತ್ತದೆ ಹಾಗೂ ಋಣಾತ್ಮಕ ಫಲಿತಾಂಶ ಬಂದ ಬಳಿಕ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇದು ದುರದೃಷ್ಟಕರ; ಆದರೆ ಜೀವನವೇ ಹಾಗೆ" ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಶಮಿ ಚೇತರಿಸಿಕೊಳ್ಳಲು ಎಷ್ಟು ದಿನಗಳು ಬೇಕಾಗಬಹುದು ಎಂಬ ಪ್ರಶ್ನೆಗೆ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ವೇಳೆಗೆ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

ಇಂಗ್ಲೆಂಡ್ ಕೌಂಟಿಯಲ್ಲಿ ಮಿಡ್ಲ್‌ಸೆಕ್ಸ್ (Middlesex) ಪರ ಆಡುತ್ತಿದ್ದ ಉಮೇಶ್ ಯಾದವ್ ರಾಯನ್ ಲಂಡನ್ ಕಪ್ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 7 ಲಿಸ್ಟ್ ಎ ಪಂದ್ಯಗಳಲ್ಲಿ ಒಂದು ಬಾರಿ ಐದು ವಿಕೆಟ್, ಮತ್ತೊಮ್ಮೆ 4 ವಿಕೆಟ್ ಸೇರಿದಂತೆ ಒಟ್ಟು 16 ವಿಕೆಟ್ ಕಬಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News