ನಮ್ಮ 'ಸ್ಟಾರ್ ಆಫ್ ಆಫ್ರಿಕಾ' ವಜ್ರ ವಾಪಸ್ ನೀಡಿ: ಬ್ರಿಟನ್‍ಗೆ ದಕ್ಷಿಣ ಆಫ್ರಿಕಾ ಆಗ್ರಹ

Update: 2022-09-19 13:09 GMT
ಸಾಂದರ್ಭಿಕ ಚಿತ್ರ

ಲಂಡನ್: ಬ್ರಿಟನ್‍ನ ರಾಣಿ ಎಲಿಝಬೆತ್(Queen Elizabeth) ಅವರ ನಿಧನಾನಂತರ ಅವರ ಕಿರೀಟದಲ್ಲಿರುವ ಹಲವಾರು ವಜ್ರಗಳನ್ನು(diamonds) ಅವುಗಳ ಮೂಲ ದೇಶಗಳಿಗೆ ವಾಪಸ್ ನೀಡಬೇಕೆಂಬ ಆಗ್ರಹ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಇತ್ತೀಚಿನ ಬೆಳವಣಿಗೆಯಲ್ಲಿ, ರಾಜಮನೆತನದ ಬಳಿ ಇರುವ ಗ್ರೇಟ್ ಸ್ಟಾರ್ ಆಫ್ ಆಫ್ರಿಕಾವನ್ನು(South Africa) ವಾಪಸ್ ನೀಡಬೇಕೆಂದು ದಕ್ಷಿಣ ಆಫ್ರಿಕಾ ಆಗ್ರಹಿಸಿದೆ. ಈ ವಜ್ರವು ಜಗತ್ತಿನ ಅತ್ಯಂತ ಕ್ಲಿಯರ್-ಕಟ್ ವಜ್ರ ಎಂಬ ಹೆಸರು ಪಡೆದಿದೆ. ಅದನ್ನು ಕಲ್ಲಿನನ್ I(Cullinan I) ಎಂದೂ ಕರೆಯಲಾಗುತ್ತದೆ ಹಾಗೂ ದಕ್ಷಿಣ ಆಫ್ರಿಕಾದಲ್ಲಿ 1905ರಲ್ಲಿ ದೊರೆತ ದೊಡ್ಡ ವಜ್ರದಿಂದ ಇದನ್ನು ತುಂಡರಿಸಲಾಗಿದೆ. ಆಫ್ರಿಕಾದ ವಸಾಹತುಶಾಹಿ ಆಡಳಿತಗಾರರು ಈ ಗ್ರೇಟ್ ಸ್ಟಾರ್ ವಜ್ರವನ್ನು ಬ್ರಿಟನ್‍ನ ರಾಜ ಮನೆತನಕ್ಕೆ ನೀಡಿದ್ದರು ಎಂದು ಹೇಳಲಾಗುತ್ತಿದೆ.

ಸ್ಟಾರ್ ಆಫ್ ಆಫ್ರಿಕಾ ವಜ್ರವನ್ನು ವಾಪಸ್ ನೀಡಬೇಕೆಂದು ಕೋರಿ ಆನ್‍ಲೈನ್ ಪಿಟಿಷನ್ ಅನ್ನೂ ಆರಂಭಿಸಲಾಗಿದೆ ಹಾಗೂ ಈ ಪಿಟಿಷನ್‍ಗೆ ಈಗಾಗಲೇ 60,000ಕ್ಕೂ ಅಧಿಕ ಮಂದಿ ಸಹಿ ಹಾಕಿದ್ದಾರೆ.

"ಬ್ರಿಟನ್ ಕದ್ದ ಎಲ್ಲಾ ಚಿನ್ನ ಮತ್ತು ವಜ್ರವನ್ನು'' ವಾಪಸ್ ನೀಡಬೇಕೆಂದು ದಕ್ಷಿಣ ಆಫ್ರಿಕಾ ಸಂಸದ ವುಯೊಲ್ವೆತು ಝುಂಗುಲ ಆಗ್ರಹಿಸಿದ್ದಾರೆ.

ಈ 530.2 ಕ್ಯಾರಟ್ ವಜ್ರವು ಕ್ರಾಸ್‍ನೊಂದಿಗೆ ರಾಜದಂಡದಲ್ಲಿದ್ದು ಕಿರೀಟಧಾರಣೆ ಸಮಾಂಭಗಳಲ್ಲಿ ಬಳಸಲಾಗುತ್ತದೆ. ಪ್ರಸ್ತುತ ಈ ವಜ್ರವನ್ನು ಟವರ್ ಆಫ್ ಲಂಡನ್‍ನ ಜುವೆಲ್ ಹೌಸ್‍ನಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶದ ಅಯ್ಯೋಧ್ಯೆಯಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್‍ಗೆ ದೇವಸ್ಥಾನ ನಿರ್ಮಿಸಿದ ಭಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News