ಕೆನಡಾ ಗುಂಡಿನ ದಾಳಿ ಪ್ರಕರಣ: ಗಾಯಾಳು ಭಾರತೀಯ ವಿದ್ಯಾರ್ಥಿ ಸಾವು

Update: 2022-09-19 17:32 GMT

ಟೊರಂಟೊ, ಸೆ.19: ಸೆಪ್ಟಂಬರ್ 12ರಂದು ಕೆನಡಾದ ಒಂಟಾರಿಯೊ ಪ್ರಾಂತದಲ್ಲಿ ದುಷ್ಕರ್ಮಿಯೊಬ್ಬ ನಡೆಸಿದ್ದ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ 28 ವರ್ಷದ ಭಾರತೀಯ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.

ಮಿಲ್ಟನ್‍ನಲ್ಲಿ ನಡೆದಿದ್ದ ಗುಂಡಿನ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದ ಸತ್ವಿಂದರ್ ಸಿಂಗ್‍ರನ್ನು ಹ್ಯಾಮಿಲ್ಟನ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸ್ ಕಾನ್‍ಸ್ಟೆಬಲ್ ಸಹಿತ ಇತರ ಇಬ್ಬರು ಮೃತಪಟ್ಟಿದ್ದರು. ದಾಳಿ ನಡೆಸಿದ್ದ ಶಂಕಿತ ಆರೋಪಿ ಸಿಯಾನ್ ಪೆಟ್ರೀ ಬಳಿಕ ಪೊಲೀಸರ ಗುಂಡೇಟಿನಿಂದ ಹತನಾಗಿದ್ದ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News