ಪತ್ನಿ ಬಿಜೆಪಿಗೆ ಸೇರುತ್ತಿಲ್ಲವೇ? ಎಂಬ ಪ್ರಶ್ನೆಗೆ ಅಮರಿಂದರ್ ಪ್ರತಿಕ್ರಿಯಿಸಿದ್ದು ಹೀಗೆ

Update: 2022-09-20 06:40 GMT

ಹೊಸದಿಲ್ಲಿ: ಕಾಂಗ್ರೆಸ್‌ನ ಮಾಜಿ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ (Amarinder Singh)ಸೋಮವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಆದರೆ  ಸಿಂಗ್ ಅವರ ಪತ್ನಿ ಹಾಗೂ ಕಾಂಗ್ರೆಸ್ ಸಂಸದೆ ಪ್ರಣೀತ್ ಕೌರ್ (Preneet Kaur)ಇನ್ನೂ ಕಾಂಗ್ರೆಸ್ ನಲ್ಲಿಯೇ ಉಳಿದಿದ್ದಾರೆ.

ತಮ್ಮ ಪತ್ನಿ ಬಿಜೆಪಿಗೆ ಸೇರುತ್ತಿಲ್ಲವೇ? ಎಂದು 81ರ ವಯಸ್ಸಿನ ಸಿಂಗ್ ಅವರಲ್ಲಿ ಕೇಳಿದಾಗ "ಹೆಂಡತಿಯಾದವಳು ಪತಿ ಏನಾದರು ಮಾಡಿದರೆ ಅದನ್ನು ಅನುಸರಿಸುವ ಅಗತ್ಯವಿಲ್ಲ’’ ಎಂದರು.

ಪ್ರಣೀತ್ ಕೌರ್ ಅವರು 2009-2014ರ ಅವಧಿಯಲ್ಲಿ ಮನಮೋಹನ್ ಸಿಂಗ್ ಸರಕಾರದಲ್ಲಿ ಕಿರಿಯ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಕೌರ್ ಪ್ರಸ್ತುತ ಪಟಿಯಾಲದಿಂದ ಹಾಲಿ ಕಾಂಗ್ರೆಸ್ ಸಂಸದರಾಗಿದ್ದಾರೆ. ಕಾಂಗ್ರೆಸ್ ಅವರ ರಾಜೀನಾಮೆ ಕೇಳಿಲ್ಲ ಹಾಗೂ ಕೌರ್  ರಾಜೀನಾಮೆ ನೀಡಲು ಮುಂದಾಗಿಲ್ಲ.

"ತಾನು  ರಾಜೀನಾಮೆ ಕೇಳಿದರೆ ಪಟಿಯಾಲದಲ್ಲಿ ಉಪ ಚುನಾವಣೆಗೆ ನಡೆಯುತ್ತದೆ. ಅದು ಎಎಪಿಗೆ ಲಾಭವಾಗುತ್ತದೆ ಎಂದು ಕಾಂಗ್ರೆಸ್ ಗೆ ಗೊತ್ತಿದೆ. ಹೀಗಾಗಿ ಕಾಂಗ್ರೆಸ್ ಹಾಗೂ ಕೌರ್  ಮೌನವಾಗಿದ್ದಾರೆ" ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಎನ್‌ಡಿಟಿವಿಗೆ ತಿಳಿಸಿದರು.

ಇತ್ತೀಚೆಗೆ ನಡೆದ ಉಪರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗಿದ್ದ ಮಾರ್ಗರೆಟ್ ಆಳ್ವಾ ಕೂಡ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದರು.

"ಶ್ರೀಮತಿ ಪ್ರಣೀತ್ ಕೌರ್ ಕ್ಯಾಪ್ಟನ್‌ಗಿಂತ ಹೆಚ್ಚು ಸಂವೇದನಾಶೀಲರು!" ಎಂದು ಆಳ್ವಾ ಟ್ವೀಟ್ ಮಾಡಿದ್ದಾರೆ.

ಅಮರಿಂದರ್ ಸಿಂಗ್ ಅವರು ತನ್ನ  ಪುತ್ರ ರಣಿಂದರ್ ಸಿಂಗ್, ಪುತ್ರಿ ಜೈ ಇಂದರ್ ಕೌರ್, ಮೊಮ್ಮಗ ನಿರ್ವಾಣ್ ಸಿಂಗ್ ಅವರೊಂದಿಗೆ ಬಿಜೆಪಿ ಸೇರಿದ್ದಾರೆ.

"ಸಿಂಗ್ ಅವರ ಕುಟುಂಬದ ಅನೇಕ ಸದಸ್ಯರ ವಿರುದ್ಧ ಪ್ರಕರಣಗಳು ನಡೆಯುತ್ತಿರುವುದರಿಂದ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಒಮ್ಮೆ ಬಿಜೆಪಿಗೆ ಸೇರಿದರೆ ನಿಮ್ಮ ಎಲ್ಲಾ ಪಾಪಗಳು ಕ್ಷಮಿಸಲ್ಪಡುತ್ತವೆ. ಆದ್ದರಿಂದ ಅವರು ತಮ್ಮ ಕುಟುಂಬವನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News