×
Ad

ಪ್ರತಿದಿನ ಬೆಳಿಗ್ಗೆ, ಸಂಜೆ ಕೇಜ್ರಿವಾಲ್ ಟೀಕಿಸುವ ಅಗತ್ಯವಿಲ್ಲ: ಗೌತಮ್ ಗಂಭೀರ್

Update: 2022-09-20 14:42 IST
Photo:PTI

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಹಿರಂಗವಾಗಿ ಟೀಕಿಸುವುದರಲ್ಲಿ ನನಗೆ ನಂಬಿಕೆ ಇಲ್ಲ. ದಿಲ್ಲಿ ಬಗ್ಗೆ ತಮ್ಮ ಮುನ್ನೋಟ ಏನು ಎಂಬುದನ್ನು ಬಿಜೆಪಿ ಜನರಿಗೆ ತಿಳಿಸಬೇಕಾಗಿದೆ ಎಂದು ಪೂರ್ವ ದಿಲ್ಲಿಯ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ( Gautam Gambhir) ಹೇಳಿದ್ದಾರೆ.

The Indian Express Idea Exchange ನಲ್ಲಿ ಮಾತನಾಡಿದ ಗಂಭೀರ್ ಬಳಿ ದಿಲ್ಲಿ ಬಿಜೆಪಿಯ ಸಂದೇಶವು ಗುರುತು ತಪ್ಪಿದೆಯೇ ಎಂದು ಕೇಳಿದಾಗ, ನಮ್ಮ ಪಕ್ಷವು ಜನರೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಸಲಹೆ ನೀಡಿದರು.

ಗಂಭೀರ್ 2019 ರಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಪೂರ್ವ ದಿಲ್ಲಿ ಲೋಕಸಭಾ ಸ್ಥಾನವನ್ನು ಗೆದ್ದಿದ್ದಾರೆ.

"ದಿಲ್ಲಿಯಲ್ಲಿ ಬಿಜೆಪಿಯ ವಿಷಯಕ್ಕೆ ಬಂದರೆ, ಸಂಸದರು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ಪ್ರತಿಪಕ್ಷದವರು ಅಸುರಕ್ಷಿತರಾಗಬಾರದು. ಅಂತಿಮವಾಗಿ, ಇದು ಆ ಏಳು ಸಂಸದರು, ಎಂಸಿಡಿ, ಬಿಜೆಪಿ ವರ್ಸಸ್ ಎಎಪಿ ಅಥವಾ ನಮ್ಮ ಮತ್ತು ಅವರ ನಡುವಿನ ವಿಚಾರವಲ್ಲ. ಎಲ್ಲರೂ ದಿಲ್ಲಿ ಉಳಿಸುವ ಬಗ್ಗೆ ಯೋಚಿಸಬೇಕು. ನೀವು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕೇಜ್ರಿವಾಲ್ ಅವರನ್ನು ಟೀಕಿಸಬೇಕು ಎಂದು ನಾನು ನಂಬುವುದಿಲ್ಲ. ಜನರು ಅವರನ್ನು ಎರಡು ಬಾರಿ ಆಯ್ಕೆ ಮಾಡಿದ್ದಾರೆ. ದಿಲ್ಲಿಯ ಜನರಿಗೆ ನಮ್ಮ ಮುನ್ನೋಟ ಏನು? ಸಾಮಾಜಿಕ ಮಾಧ್ಯಮ ರಾಜಕೀಯವು ನಮ್ಮನ್ನು ಎಲ್ಲಿಗೂ ಕರೆದೊಯ್ಯುವುದಿಲ್ಲ. ಜನರ ಬಳಿಗೆ ಹೋಗಲು ಹಾಗೂ  ನೀವು ಮಾಡಿದ ಕೆಲಸವನ್ನು ತೋರಿಸಲು ಒಂದೇ ಒಂದು ಮಾರ್ಗವಿದೆ. ನೇರವಾಗಿ ಜನರೊಂದಿಗೆ ಸಂಪರ್ಕದಲ್ಲಿರಿ'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News