×
Ad

ಐಎಎಸ್ ಅಧಿಕಾರಿಯಾಗಿ ಮರುನೇಮಕಾತಿ ಬಳಿಕ ಆರ್ಟಿಕಲ್ 370 ವಿರುದ್ಧದ ಅರ್ಜಿ ಹಿಂಪಡೆದ ಶಾ ಫೈಸಲ್

Update: 2022-09-20 18:45 IST
ಶಾ ಫೈಸಲ್ (PTI)

ಹೊಸದಿಲ್ಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರಾಷ್ಟ್ರಪತಿಗಳ ಆದೇಶದ ಮೂಲಕ ರದ್ದುಗೊಳಿಸಿದ ಕ್ರಮವನ್ನು ಪ್ರಶ್ನಿಸಿ ತಾವು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಐಎಎಸ್(IAS) ಅಧಿಕಾರಿ ಶಾ ಫೈಸಲ್ (Shah Faesal) ವಾಪಸ್ ಪಡೆದಿದ್ದಾರೆ.

ಈ ಹಿಂದೆ ಐಎಎಸ್ ತೊರೆದಿದ್ದ ಶಾ ಫೈಸಲ್ ಅವರನ್ನು ಈ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಮರಳಿ ಐಎಎಸ್‍ಗೆ ಸೇರ್ಪಡೆಗೊಳಿಸಿದ ನಂತರ ಅವರನ್ನು ಸಂಸ್ಕೃತಿ ಸಚಿವಾಲಯದ ಉಪಕಾರ್ಯದರ್ಶಿಯನ್ನಾಗಿ ನೇಮಕಗೊಳಿಸಿದ ಕೆಲವೇ ತಿಂಗಳುಗಳಲ್ಲಿ ಮೇಲಿನ ಬೆಳವಣಿಗೆ ನಡೆದಿದೆ.

370ನೇ ವಿಧಿಯನ್ನು ರದ್ದುಗೊಳಿಸಿದ ಕ್ರಮವನ್ನು ಪ್ರಶ್ನಿಸಿದ್ದ 23 ಅರ್ಜಿದಾರರಲ್ಲಿ ಶಾ ಫೈಸಲ್ ಕೂಡ ಒಬ್ಬರಾಗಿದ್ದರು. ಸರಕಾರದ ಕ್ರಮವನ್ನು ವಿರೋಧಿಸಿ ಐಎಎಸ್ ಸೇವೆಗೆ ರಾಜೀನಾಮೆ ನೀಡಿ ನಂತರ ತಮ್ಮ ಸ್ವಂತ ಪಕ್ಷ – ಜಮ್ಮು ಎಂಡ್ ಕಾಶ್ಮೀರ್ ಪೀಪಲ್ಸ್ ಮೂವ್‍ಮೆಂಟ್ ಅನ್ನು ಅವರು ಆರಂಭಿಸಿದ್ದರು. ಮುಂದೆ ಅವರು ಇಸ್ತಾಂಬುಲ್‍ಗೆ ತೆರಳಲು ನಿರ್ಧರಿಸಿದ್ದ ವೇಳೆ ಅವರನ್ನು ಸೆಕ್ಷನ್ 107 ಅನ್ವಯ ವಶಪಡಿಸಿಕೊಳ್ಳಲಾಗಿತ್ತು ಹಾಗೂ ಜೂನ್ 2020 ರಲ್ಲಿ ಅವರನ್ನು ಬಿಡುಗಡೆಗೊಳಿಸಲಾಗಿತ್ತು.

ಆದರೆ ಅವರ ರಾಜೀನಾಮೆಯನ್ನು ಸರಕಾರ ಒಪ್ಪಿರಲಿಲ್ಲ ಹಾಗೂ ನಂತರ ಅವರು ಅದನ್ನು ವಾಪಸ್ ಪಡೆದುಕೊಂಡಿದ್ದರು.

ಇದನ್ನೂ ಓದಿ: ಶಿವಮೊಗ್ಗ | ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪ: ಇಬ್ಬರು ಶಂಕಿತರ ಬಂಧನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News