ಅರ್ಧ ಹೃದಯದೊಂದಿಗೆ ಜನಿಸಿದ ಬಾಲಕಿ ವಾಷಿಂಗ್ಟನ್ !

Update: 2022-09-20 18:32 GMT
pti

ಸೆ.20: ಅರ್ಧ ಹೃದಯದೊಂದಿಗೆ ಜನಿಸಿದ್ದ ಅಮೆರಿಕದ 5 ವರ್ಷದ ಬಾಲಕಿ ಈಗ ಅತೀ ಅಪೂರ್ವವಾದ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಆಕೆಯ ಜೀವಕ್ಕೆ ಅಪಾಯವಿದೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.

ಬೋಸ್ಟನ್ ನಿವಾಸಿ 5 ವರ್ಷದ ಕ್ಯಾಥರಿನ್ ಲ್ಯಾಂಗ್ ಜನಿಸುವಾಗಲೇ ಆಕೆಯ ಎಡಹೃದಯ ಸರಿಯಾಗಿ ಬೆಳವಣಿಗೆ ಹೊಂದಿರದ ಕಾರಣ ಉಸಿರಾಡಲು ಕಷ್ಟಪಡುತ್ತಿದ್ದಾಳೆ. ಇದರ ಜತೆಗೆ ಯಕೃತ್ತು(ಪಿತ್ತಜನಕಾಂಗ) ಸೋರಿಕೆಯ ಸಮಸ್ಯೆಯೂ ಇದೆ. ಈ ಬಾಲಕಿಗೆ ಈಗಾಗಲೇ 3 ಬಾರಿ ತೆರೆದ ಹೃದಯದ ಶಸ್ತ್ರಚಿಕಿತ್ಸೆ ಆಗಿದೆ. ಇದೀಗ ಮತ್ತೆ ಆಕೆಯ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದು ಮತ್ತೆ ಹೃದಯ ಶಸ್ತ್ರಚಿಕಿತ್ಸೆ ಮಾಡಬೇಕಿದೆ. ಆಗಲೂ ಆರೋಗ್ಯ ಸುಧಾರಿಸದಿದ್ದರೆ ಹೃದಯ ಕಸಿ ಮಾಡಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಹೇಗಾದರೂ ಮಾಡಿ ತಮ್ಮ ಮಗಳನ್ನು ಉಳಿಸಿಕೊಳ್ಳುವುದಾಗಿ ಬಾಲಕಿಯ ತಂದೆ ಗ್ಯಾರಿ ಲ್ಯಾಂಗ್ ಪಣತೊಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News