ಮೀನಾ ಕಂದಸಾಮಿಗೆ ಪೆನ್ ಜರ್ಮನಿ ಪ್ರಶಸ್ತಿ

Update: 2022-09-20 18:39 GMT

ಹೊಸದಿಲ್ಲಿ, ಸೆ. 20: ಪೆನ್ ಇಂಟರ್‌ನ್ಯಾಷನಲ್ ರೈಟರ್ಸ್‌ ಅಸೋಸಿಯೇಶನ್‌ನ ಜರ್ಮನ್ ಚಾಪ್ಟರ್‌ನ ಹರ್ಮನ್ ಕೆಸ್ಟೆನ್‌ಪುರಸ್ಕಾರಕ್ಕೆ ಭಾರತದ ಬರಹಗಾರ್ತಿ ಹಾಗೂ ಕವಯಿತ್ರಿ ಮೀನಾ ಕಂದಸಾಮಿ ಅವರು ಸೋಮವಾರ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಬಂದಿರುವುದನ್ನು ತನಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುಂಟರ್ ಗ್ರಾಸ್ ಹಾಗೂ ಹೆರೋಲ್ಡ್ ಪಿಂಟರ್ ಸೇರಿದಂತೆ ಈ ಹಿಂದೆ ಪ್ರಶಸ್ತಿಗೆ ಪಾತ್ರರಾದವರು ಹಾಗೂ ಈ ಪ್ರಶಸ್ತಿಯ ಮಹತ್ವವನ್ನು ನಾನು ಸ್ಪಲ್ಪ ಸ್ವಲ್ಪವೇ ಅರಿತುಕೊಳ್ಳುತ್ತಿದ್ದೇನೆ. ನಾನು ಏನು ಮಾಡಿದ್ದೆನೆಯೇ ಅದನ್ನು ಈ ಪ್ರಶಸ್ತಿ ಅನುಮೋದಿಸಿದೆ. ಇಂದು ಭಾರತದಲ್ಲಿ ಪ್ರಗತಿಪರ ಬರೆಹಗಾರರು ಹಾಗೂ ಕಲಾವಿದರಾಗಿರುವ ನಮಗೆಲ್ಲರಿಗೂ ಐತಿಹಾಸಿಕ ಜವಾಬ್ದಾರಿ ಇದೆ ಎಂದು ಅವರು ಹೇಳಿದ್ದಾರೆ.

ಕಿರುಕುಳಕ್ಕೊಳಗಾದ ಬರೆಹಗಾರರನ್ನು ಬೆಂಬಲಿಸುವಲ್ಲಿನ ಉತ್ಕೃಷ್ಟ ಪ್ರಯತ್ನವನ್ನು ಗುರುತಿಸಿ ವ್ಯಕ್ತಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಕಂದಸಾಮಿ ಅವರು ಮಿಸ್ ಮಿಲಿಟೆನ್ಸಿ, ದಿ ಜಿಪ್ಸಿ ಗೋಡೆಸ್, ಎಕ್ಸ್‌ಕ್ವಿಸಿಟ್ ಕ್ಯಾಡವರ್ಸ್, ವೆನ್ ಐ ಹಿಟ್‌ಯು: ಆರ್, ಎ ಪಾಟ್ರೈಟ್ ಆಫ್ ದಿ ರೈಟರ್ ಆಸ್ ಎ ಯಂಗ್ ವೈಫ್ ಮೊದಲಾದ ಕೃತಿಗಳನ್ನು ಅವರು ರಚಿಸಿದ್ದಾರೆ.

ಪ್ರಜಾಪ್ರಭುತ್ವ ಹಾಗೂ ಮಾನವ ಹಕ್ಕುಗಳಿಗಾಗಿ ಭೀತಿ ರಹಿತ ಹೋರಾಟ ಮಾಡುವವರು ಎಂದು ಕಂದ ಸಾಮಿ ಅವರನ್ನು ಪೆನ್ ಸೆಂಟರ್ ಜರ್ಮನಿಯ ಉಪಾಧ್ಯಕ್ಷ ಕರ್ನೇಲಿಯಾ ಝಟ್ಝೆಚೆ ಅವರು ವ್ಯಾಖ್ಯಾನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News