ಮೆಕ್ಸಿಕೋದಲ್ಲಿ ಭೂಕಂಪ

Update: 2022-09-20 18:43 GMT

ಮೆಕ್ಸಿಕೋ ಸಿಟಿ, ಸೆ.20: ಸೋಮವಾರ ಮೆಕ್ಸಿಕೋದ ಮಧ್ಯ ಪೆಸಿಫಿಕ್ ಕರಾವಳಿಯಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿದ್ದು ಕೆಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಅಕ್ವಿಲಾ ನಗರದ ಆಗ್ನೇಯದಲ್ಲಿ 37 ಕಿ.ಮೀ ದೂರದಲ್ಲಿ ಮತ್ತು 15.1 ಕಿ.ಮೀ ಆಳದಲ್ಲಿ ಭೂಕಂಪ ಕೇಂದ್ರೀಕೃತವಾಗಿತ್ತು. ಹೆಚ್ಚಿನ ನಾಶ ನಷ್ಟದ ಬಗ್ಗೆ ತಕ್ಷಣಕ್ಕೆ ಮಾಹಿತಿಯಿಲ್ಲ ಎಂದು ಮಿಕೊವಕನ್ ರಾಜ್ಯದ ಸಾರ್ವಜನಿಕ ಸುರಕ್ಷಾ ಸಮಿತಿ ಹೇಳಿದೆ. ಅಕ್ವಿಲಾ ನಗರಕ್ಕೆ ಸಮೀಪದ ಕರಾವಳಿ ತೀರ ಪ್ರದೇಶದ ಸಮುದ್ರದಲ್ಲಿ ಸುನಾಮಿ ಅಲೆಗಳು ಉಂಟಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News