19 ವರ್ಷದ 'ಝೆಪ್ಟೋ' ಸ್ಥಾಪಕರು ಭಾರತದ ಅತ್ಯಂತ ಕಿರಿಯ ಶ್ರೀಮಂತ ವ್ಯಕ್ತಿಗಳು

Update: 2022-09-21 13:45 GMT
ಕೈವಲ್ಯ ವೋಹ್ರಾ / ಆದಿತ್‌ ಪಲೀಚಾ

ಹೊಸದಿಲ್ಲಿ: ಐಐಎಫ್‌ಎಲ್‌ ವೆಲ್ತ್‌ ಹುರುನ್‌ ಇಂಡಿಯಾ ರಿಚ್‌ ಲಿಸ್ಟ್‌ 2022 ಪ್ರಕಾರ ಝೆಪ್ಟೋ(Zepto) ಸಹ-ಸ್ಥಾಪಕ 19 ವರ್ಷದ ಕೈವಲ್ಯ ವೋಹ್ರಾ(Kaivalya Vohra) ಅವರು  ಭಾರತದ ಸ್ವಯಂ ಪ್ರಯತ್ನದಿಂದ ಉನ್ನತಿ ಸಾಧಿಸಿದ ಅತ್ಯಂತ ಕಿರಿಯ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಕೈವಲ್ಯನ ಪಾಲುದಾರ ಆದಿತ್‌ ಪಲೀಚಾ(Aadit Palicha) ಕೂಡ ಭಾರತದ ಅತ್ಯಂತ ಕಿರಿಯ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.

ಸ್ಟಾನ್‌ಫೋರ್ಡ್‌ ವಿವಿಯಲ್ಲಿ ಶಿಕ್ಷಣವನ್ನು ಅರ್ಧದಲ್ಲಿಯೇ ತೊರೆದ ಇಬ್ಬರೂ ಝೆಪ್ಟೋ ಸಂಸ್ಥೆಯನ್ನು 2021 ರಲ್ಲಿ ಪ್ರಾರಂಭಿಸಿದ್ದರು. ಇಬ್ಬರಿಗೂ 19 ವರ್ಷ ವಯಸ್ಸಾಗಿದ್ದು ಅವರ ದಿನಸಿ ವಸ್ತುಗಳ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ ಝೆಪ್ಟೋ ಮೌಲ್ಯ 900 ಮಿಲಿಯನ್‌ ಡಾಲರ್‌ ಎಂದು ಅಂದಾಜಿಸಲಾಗಿದೆ.

ಹುರುನ್‌ ಪಟ್ಟಿಯ ಪ್ರಕಾರ 90ರ ದಶಕದಲ್ಲಿ ಜನಿಸಿದ 13 ಜನರು ಸ್ವಯಂಪ್ರಯತ್ನದಿಂದ ಶ್ರೀಮಂತರಾದ ಅತ್ಯಂತ ಕಿರಿಯರ ಪಟ್ಟಿಯಲ್ಲಿದ್ದಾರೆ. ಕೈವಲ್ಯ ವೋಹ್ರಾ ಬೆಂಗಳೂರಿನವರಾಗಿದ್ದಾರೆ ಹಾಗೂ ಅವರ ಸಂಪತ್ತಿನ ಮೌಲ್ಯ ರೂ. 1000 ಕೋಟಿ ಆಗಿದ್ದು ಅವರು ಅತ್ಯಂತ ಶ್ರೀಮಂತ ಕಿರಿಯರ ಪಟ್ಟಿಯಲ್ಲಿ 1,036ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಪಲೀಚಾ ಅವರು 950ನೇ ಸ್ಥಾನದಲ್ಲಿದ್ದು ಅವರ ಸಂಪತ್ತಿನ ಮೌಲ್ಯ ರೂ. 1,200 ಕೋಟಿ ಆಗಿದೆ.

ಝೆಪ್ಟೋ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇ-ಗ್ರೋಸರಿ ಸಂಸ್ಥೆಯಾಗಿದ್ದು ಇತ್ತೀಚೆಗೆ ಸಂಸ್ಥೆ 200 ಮಿಲಿಯನ್‌ ಡಾಲರ್‌ ಹಣ ಹೂಡಿಕೆಯನ್ನು ವೈ ಕಾಂಬಿನೇಟರ್‌ ಕಂಟಿನ್ಯುಟಿ, ಕೈಸರ್‌ ಪರ್ಮನೆಂಟೆ, ನೆಕ್ಸಸ್‌ ವೆಂಚೂರ್‌ ಪಾರ್ಟ್‌ನರ್ಸ್‌, ಗ್ಲೇಡ್‌ ಬ್ರುಕ್‌ ಕ್ಯಾಪಿಟಲ್‌ ಮತ್ತು ಲಾಚಿ ಗ್ರೂಮ್‌ನಿಂದ  ಪಡೆದಿದೆ.

ಝೆಪ್ಟೋ ಕಾರ್ಯಾಲಯ ಮುಂಬೈಯಲ್ಲಿದ್ದು ಪ್ರಸ್ತುತ ಅದು ದೇಶದ 10 ಪ್ರಮುಖ ನಗರಗಳಲ್ಲಿ ಸೇವೆ ಒದಗಿಸುತ್ತಿದ್ದು ಕಂಪೆನಿಯಲ್ಲಿ 1000ಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ತಾಜಾ ಹಣ್ಣು, ತರಕಾರಿ, ಅಡುಗೆ ಸಾಮಗ್ರಿಗಳು, ಡೈರಿ ಉತ್ಪನ್ನಗಳು, ಆರೋಗ್ಯ ಮತ್ತು ಸ್ವಚ್ಛತೆಗೆ ಸಂಬಂಧಿಸಿದ ಉತ್ಪನ್ನಗಳ ಸಹಿತ ಮೂರು ಸಾವಿರಕ್ಕೂ ಅಧಿಕ ಉತ್ಪನ್ನಗಳನ್ನು ಸಂಸ್ಥೆ ಹೊಂದಿದ್ದು ಗ್ರಾಹಕರಿಗೆ ಅವರ ಆರ್ಡರ್‌ ಅನ್ನು 10 ನಿಮಿಷಗಳೊಳಗಾಗಿ ತಲುಪಿಸುತ್ತದೆ.

ಇದನ್ನೂ ಓದಿ: ನಾಳೆ ಸದನದಲ್ಲಿ ಸಚಿವರೊಬ್ಬರ ಅಕ್ರಮ ಬಯಲು ಮಾಡುವೆ: ಎಚ್.ಡಿ ಕುಮಾರಸ್ವಾಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News