ಬಿಲ್ಕಿಸ್ ಬಾನು ಪ್ರಕರಣದ ಸಾಕ್ಷಿಗೆ ಬಿಡುಗಡೆಗೊಂಡ ಅಪರಾಧಿಯಿಂದ 'ಜೀವ ಬೆದರಿಕೆ': ಸಿಜೆಐಗೆ ಪತ್ರ

Update: 2022-09-21 15:39 GMT
ಬಿಲ್ಕಿಸ್ ಬಾನು (File Photo: PTI)

ಹೊಸದಿಲ್ಲಿ: ಬಿಲ್ಕಿಸ್ ಬಾನು ಪ್ರಕರಣದ ಪ್ರಮುಖ ಸಾಕ್ಷಿ ಇಮ್ತಿಯಾಜ್ ಘಾಂಚಿ (Imtiaz Ghanchi) (45) ಅವರು ಇತ್ತೀಚೆಗೆ ಅಪರಾಧಿಗಳಲ್ಲಿ ಒಬ್ಬರಾದ ರಾಧೇಶ್ಯಾಮ್ ಶಾ (Radheshyam Shah) ಅವರಿಂದ ಬೆದರಿಕೆ ಬಂದಿದೆ ಎಂದು ಆರೋಪಿಸಿ ಭಾರತದ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್(U.U. Lalit) ಅವರಿಗೆ ಪತ್ರ ಬರೆದಿದ್ದಾರೆ. ತನ್ನ ಜೀವಕ್ಕೆ "ಬೆದರಿಕೆ" ಹಿನ್ನೆಲೆಯಲ್ಲಿ ರಕ್ಷಣೆ ಪಡೆಯಲು ಬರೆದಿರುವುದಾಗಿ ಅವರು ತಿಳಿಸಿದ್ದಾರೆಂದು thequint.com ಮಾಡಿದೆ.

"ನೀನು ಗ್ರಾಮವನ್ನು ತೊರೆಯುವವರೆಗೂ ನಾವು ನಿಮಗೆ ಹೊಡೆಯುವುದಾಗಿ" ಸೆಪ್ಟೆಂಬರ್ 15 ರಂದು ರಾಧೆಶ್ಯಾಮ್ ನನಗೆ ಬೆದರಿಕೆ ಹಾಕಿದರು ಎಂದು ಘಾಂಚಿ ಆರೊಪಿಸಿದ್ದಾರೆ. 

ಗುಜರಾತ್ 2002 ರ ಗೋಧ್ರಾ ಗಲಭೆಯ ಸಂದರ್ಭದಲ್ಲಿ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಅವರ ಮೂರು ವರ್ಷದ ಮಗಳು ಸೇರಿದಂತೆ 14 ಕುಟುಂಬ ಸದಸ್ಯರ ಸಾಮೂಹಿಕ ಹತ್ಯೆಗಾಗಿ ಶಿಕ್ಷೆಗೊಳಗಾದ 11 ಅಪರಾಧಿಗಳಲ್ಲಿ ರಾಧೆಶ್ಯಾಮ್  ಒಬ್ಬ. ಗುಜರಾತ್ ಸರ್ಕಾರವು ಸನ್ನಡತೆಯ ಆಧಾರದ ಮೇಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಎಲ್ಲರನ್ನೂ ಬಿಡುಗಡೆಗೊಳಿಸಿತ್ತು.

ಬಿಡುಗಡೆಗೊಂಡ ಅಪರಾಧಿಗಳಿಗೆ ಸ್ವಾಗತವನ್ನು ಕೂಡಾ ಮಾಡಲಾಗಿತ್ತು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: 19 ವರ್ಷದ 'ಝೆಪ್ಟೋ' ಸ್ಥಾಪಕರು ಭಾರತದ ಅತ್ಯಂತ ಕಿರಿಯ ಶ್ರೀಮಂತ ವ್ಯಕ್ತಿಗಳು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News