ವಿದೇಶಿ ವಿವಿಗಳೊಂದಿಗೆ 48 ಭಾರತೀಯ ವಿವಿಗಳ ಒಪ್ಪಂದ:ಯುಜಿಸಿ ಮುಖ್ಯಸ್ಥ
Update: 2022-09-21 21:55 IST
ಹೊಸದಿಲ್ಲಿ,ಸೆ.21: ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಷನ್ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ವಿವಿಗಳು ಸರಕಾರದ ಅವಳಿ ಯೋಜನೆಯಡಿ ವಿದೇಶದ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ತೊಡಗಿಕೊಂಡಿರುವ ಅಥವಾ ಸಹಭಾಗಿತ್ವ ಒಪ್ಪಂದದ ಅಂತಿಮ ಹಂತದಲ್ಲಿರುವ 48 ಭಾರತೀಯ ವಿವಿಗಳಲ್ಲಿ ಒಳಗೊಂಡಿವೆ.
ಸೇಲಮ್‌ನ ಪೆರಿಯಾರ್ ವಿವಿ,ಕರ್ನಾಟಕದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಮತ್ತು ಪಾಂಡಿಚೇರಿ ವಿವಿ ಇವು ಯೋಜನೆಯಡಿ ಸಹಭಾಗಿತ್ವವನ್ನು ಹೊಂದಿರುವ ದಕ್ಷಿಣದ ಇತರ ಮೂರು ಶಿಕ್ಷಣ ಸಂಸ್ಥೆಗಳಾಗಿವೆ ಎಂದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಅಧ್ಯಕ್ಷ ಪ್ರೊ.ಎಂ.ಜಗದೀಶ ಕುಮಾರ್ ಸುದ್ದಿಸಂಸ್ಥೆಗೆ ತಿಳಿಸಿದರು.
ಈ ವರ್ಷದ ಮೇ ತಿಂಗಳಿನಲ್ಲಿ ನಿಯಮಾವಳಿಗಳು ಬಿಡುಗಡೆಯಾದಾಗಿನಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅವರು ತಿಳಿಸಿದರು.