ಭಟ್ಕಳ: ಪ್ರವಾದಿ ಮುಹಮ್ಮದ್ ಪೈಗಂಬರ್ ಜೀವನ ಸಂದೇಶ ಸಾರುವ ಕಾರ್ಯಕ್ರಮ, ಪ್ರಬಂಧ ಸ್ಪರ್ಧೆ

Update: 2022-09-21 16:53 GMT

ಭಟ್ಕಳ: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ ಸಂದೇಶವನ್ನು ಸಾರುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಆ ಪ್ರಯುಕ್ತ ಪಿ.ಯು.ಸಿ. ಮತ್ತು ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಖಲೀಫಾ ಜಮಾತುಲ್ ಮುಸ್ಲಿಮೀನ್‍ನ ಮುಖ್ಯ ಖಾಜಿ ಮೌಲಾನಾ ಖ್ವಾಜಾ ಮೊಹಿನುದ್ದೀನ್ ಅಕ್ರಮಿ ಮದನಿ ಹೇಳಿದರು. 

ಅವರು ಮರ್ಕಝಿ ಖಲೀಫಾ ಜಮಾತುಲ್ ಮುಸ್ಲಿಮೀನ್ ಕಾರ್ಯಲಯದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.

ಪ್ರಬಂಧ ಸ್ಪರ್ಧೆಯು ಪಿ.ಯು.ಸಿ. ಮತ್ತು ಪದವಿ ಎರಡು ಸ್ಥರಗಳಲ್ಲಿ ನಡೆಯುತ್ತಿದ್ದು ವಿದ್ಯಾರ್ಥಿಗಳು ಇಂಗ್ಲೀಷ್ ಹಾಗೂ ಕನ್ನಡ ಬಾಷೆಯಲ್ಲಿ ಬರೆಯಲು ಅವಕಾಶವಿದೆ. ಪ್ರಥಮ ಬಹುಮಾನ ರೂ. ಹತ್ತು ಸಾವಿರ, ಎರಡನೇ ಬಹುಮಾನ ಏಳು ಸಾವಿರ ಮೂರನೇ ಬಹುಮಾನ ಐದು ಸಾವಿರ ಹಾಗೂ ರೂಪಾಯಿ ಎರಡು ಸಾವಿರದ ಹತ್ತು ಸಮಾಧಾನಕರ ಬಹುಮಾನ ನೀಡಲಾಗುವುದು ಎಂದರು.  ಅಲ್ಲದೇ 9 ವರ್ಷದೊಳಗಿನ ಮಕ್ಕಳಿಗಾಗಿ ನಾಥ್ ಸ್ಪರ್ಧೆಯನ್ನು ಇಡಲಾಗಿದ್ದು ಮೂರು ನಿಮಿಷಗಳ ವೀಡಿಯೋ ಮಾಡಿ ಕಳುಹಿಸುವಂತೆಯೂ ಕೋರಿದ್ದಾರೆ. ನಾಥ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ. ಮೂರು ಸಾವಿರ, ದ್ವಿತೀಯ ಬಹುಮಾನ  ಎರಡು ಸಾವಿರ, ಮೂರನೇ ಬಹುಮಾನ ಎರಡು ಸಾವಿರ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಡಾ. ಸೈಯದ್ ಜಮೀರುಲ್ಲಾ ಷರೀಫ್ ಅವರು ಪ್ರವಾದಿಗಳು ಮನಸ್ಸನ್ನು ಜೋಡಿಸುವಂತಹ ಕಾರ್ಯ ಮಾಡಲು ಕರೆ ಕೊಟ್ಟಿದ್ದರು. ಅವರು ಕೇವಲ ಒಂದು ಧರ್ಮದ ಪ್ರವಾದಿಯಾಗಿರಲಿಲ್ಲ, ಬದಲಾಗಿ ಮನುಕುಲದ ಪ್ರವಾದಿಯಾಗಿದ್ದರು. ಅವರ ಜೀವನ ಸಂದೇಶವನ್ನು ಜನಕ್ಕೆ ಸಾರಿ ಹೇಳುವುದೇ ಈ ಸ್ಪರ್ಧೆಯ ಉದ್ದೇಶವಾಗಿದೆ. "ಪ್ರವಾದಿಯವರ ಜೀವನ ಸಂದೇಶದಲ್ಲಿ ಸಾಮಾಜಿ ಸಾಮರಸ್ಯಗಳು" ಎನ್ನುವ ವಿಷಯವನ್ನು ಪ್ರಬಂಧಕ್ಕೆ ಆಯ್ಕೆ ಮಾಡಿಕೊಂಡಿದ್ದು ಪ್ರಬಂಧವನ್ನು ಯಾರು ಬೇಕಾದರು ಬರೆಯಬಹುದು. ಅಗತ್ಯ ಸಾಮಗ್ರಿಗಳು ಬೇಕಾದಲ್ಲಿ ತಾವು ಕೂಡಾ ಅದನ್ನು ನೀಡಲು ಸಿದ್ಧರಿದ್ದು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಭಾಗವಹಿಸುವಂತೆ ಕರೆ ನೀಡಿದರು. ನಂತರ ಇದೇ ಅಭಿಯಾನದ ಅಂಗವಾಗಿ ಮಸೀದಿ ದರ್ಶನ ಕಾರ್ಯಕ್ರಮ, ಅಟೋ, ಟ್ಯಾಕ್ಸಿಗಳ ಹಿಂಬದಿಯಲ್ಲಿ ಪೈಗಂಬರರ ಸಂದೇಶಗ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ರಮ ಹಾಗೂ ಕೊನೆಯಲ್ಲಿ ಬಹುಮಾನ ವಿತರಣೆಯ ಕಾರ್ಯಕ್ರಮವನ್ನು ಆಯೋಜಿಸಲಾಗು ವುದು ಎಂದೂ ಅವರು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಇಸ್ಮಾಯಿಲ್ ಜುಕಾಕು, ತಲ್ಹಾ ಸಿದ್ಧಿಬಾಪಾ ಮುಂತಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News