ರಶ್ಯದ ಮೇಲಿನ ನಿರ್ಬಂಧ ರದ್ದತಿಗೆ ಹಂಗರಿ ಪ್ರಧಾನಿ ಆಗ್ರಹ

Update: 2022-09-22 16:43 GMT

ಬುದಾಪೆಸ್ಟ್, ಸೆ.22: ರಶ್ಯದ ವಿರುದ್ಧ ಯುರೋಪಿಯನ್ ಯೂನಿಯನ್ ವಿಧಿಸಿರುವ ನಿರ್ಬಂಧಗಳನ್ನು ತಕ್ಷಣ ರದ್ದುಗೊಳಿಸುವ ಅಗತ್ಯವಿದೆ ಎಂದು ಹಂಗರಿಯ ಪ್ರಧಾನಿ ವಿಕ್ಟರ್ ಆರ್ಬನ್ ಹೇಳಿರುವುದಾಗಿ ವರದಿಯಾಗಿದೆ.

ಆಡಳಿತಾರೂಢ ಫಿಡೆಝ್ ಪಕ್ಷದ ಸಭೆಯಲ್ಲಿ ಪ್ರಧಾನಿ ಈ ಹೇಳಿಕೆ ನೀಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನು ಸರಕಾರದ ವಕ್ತಾರ ಝೋಲ್ಟನ್ ಕೊವಾಕ್ಸ್ ದೃಢಪಡಿಸಿದ್ದಾರೆ.

ರಶ್ಯದ ಮೇಲೆ ನಿರ್ಬಂಧ ವಿಧಿಸಿರುವುದನ್ನು ಆರ್ಬನ್ ಈ ಹಿಂದೆಯೂ ಕಟುವಾಗಿ ಟೀಕಿಸಿದ್ದರು. ರಶ್ಯದ ಮೇಲೆ ನಿರ್ಬಂಧ ಜಾರಿಗೊಂಡ ಬಳಿಕ ಗ್ಯಾಸ್(ಅನಿಲ)ದ ದರ ಹೆಚ್ಚಳವಾಗಿದ್ದು ಹಣದುಬ್ಬರ ಗರಿಷ್ಟ ಮಟ್ಟ ತಲುಪಿದೆ. ಒಂದು ವೇಳೆ ನಿರ್ಬಂಧ ರದ್ದುಗೊಂಡರೆ ತಕ್ಷಣ ಅನಿಲದ ದರದಲ್ಲಿ 50% ಇಳಿಕೆಯಾಗಲಿದೆ . ರಶ್ಯದ ಮೇಲಿನ ನಿರ್ಬಂಧ ಜಾರಿಯಿಂದ ರಶ್ಯಕ್ಕೆ ಆಗಿರುವ ನಷ್ಟಕ್ಕಿಂತ ಹೆಚ್ಚಿನ ನಷ್ಟ ಯುರೋಪಿಯನ್ ಯೂನಿಯನ್‍ಗೆ ಆಗಿದೆ ಎಂದು ಆರ್ಬನ್ ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News