ಮೆಕ್ಸಿಕೋದಲ್ಲಿ ಮತ್ತೆ ಭೂಕಂಪ

Update: 2022-09-22 16:58 GMT

ಮೆಕ್ಸಿಕೋ ಸಿಟಿ, ಸೆ.22: ಮೆಕ್ಸಿಕೋದಲ್ಲಿ ಗುರುವಾರ 6.5 ತೀವ್ರತೆಯ ಭೂಕಂಪ ಸಂಭವಿಸಿದ್ದು ಇದು  ದೇಶದಲ್ಲಿ ಈ ವಾರ ಸಂಭವಿಸಿದ 3ನೇ ಭೂಕಂಪವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೆಕ್ಸಿಕೋದ ಮಿಚೊವಕಾನ್ ನಗರದಲ್ಲಿ , ಭೂಮಿಯ ಮೇಲ್ಮೈಗಿಂತ 80 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರದ ಹೇಳಿಕೆ ತಿಳಿಸಿದೆ. ಭೂಕಂಪದ ಬಳಿಕ ಸುನಾಮಿಯ ಎಚ್ಚರಿಕೆ ನೀಡಿಲ್ಲ.  ನಾಶ-ನಷ್ಟದ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News