2023ರಲ್ಲಿ ಬಾಹ್ಯಾಕಾಶಕ್ಕೆ ಸೌದಿ ಅರೆಬಿಯಾದ ಮಹಿಳೆ

Update: 2022-09-22 17:01 GMT

ರಿಯಾದ್, ಸೆ.22: ಸೌದಿ ಬಾಹ್ಯಾಕಾಶ ಆಯೋಗದ ನೂತನ ಬಾಹ್ಯಾಕಾಶ ಕಾರ್ಯಕ್ರಮದಡಿ , 2023ರಲ್ಲಿ ಪ್ರಥಮ ಸೌದಿ ಮಹಿಳೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು ಎಂದು ಸೌದಿ ಪ್ರೆಸ್ ಏಜೆನ್ಸಿ(ಎಸ್‍ಪಿಎ) ಗುರುವಾರ  ವರದಿ ಮಾಡಿದೆ.

ಹೊಸ ಬಾಹ್ಯಾಕಾಶ ಕಾರ್ಯಕ್ರಮದಡಿ ಸೌದಿಯ ಪ್ರಜೆಯನ್ನು ಬಾಹ್ಯಾಕಾಶಕ್ಕೆ ರವಾನಿಸಲಿದ್ದು ಇದು ದೇಶಕ್ಕೆ ಐತಿಹಾಸಿಕ ಘಟನೆಯಾಗಲಿದೆ. ಬಾಹ್ಯಾಕಾಶ ಆಯೋಗ ಗುರುವಾರ ಘೋಷಿಸಿದ ಗಗನಯಾನಿ ಕಾರ್ಯಕ್ರಮವು ದೀರ್ಘ ಮತ್ತು ಅಲ್ಪಾವಧಿಯ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಭಾಗವಹಿಸುವ, ವೈಜ್ಞಾನಿಕ ಪ್ರಯೋಗಗಳು, ಅಂತರಾಷ್ಟ್ರೀಯ ಸಂಶೋಧನೆ ಮತ್ತು ಭವಿಷ್ಯದ ಬಾಹ್ಯಾಕಾಶ ಸಂಬಂಧಿತ ಕಾರ್ಯಾಚರಣೆಗಳಲ್ಲಿ ಭಾಗವಹಿಸುವ  ಅರ್ಹ ಮತ್ತು ಅನುಭವಿ ಸೌದಿ ಪ್ರಜೆಗಳನ್ನು ತಯಾರಿಸುವ ಉದ್ದೇಶ ಹೊಂದಿದೆ. ಜಾಗತಿಕವಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಲಭ್ಯವಿರುವ ಭರವಸೆಯ ಅವಕಾಶಗಳ ಲಾಭವನ್ನು ತನ್ನ ನಾಗರಿಕರಿಗೆ ಲಭ್ಯವಾಗಿಸಲು ಮತ್ತು ಮಾನವೀಯತೆಗೆ ಸೇವೆ ಸಲ್ಲಿಸುವ ಸಂಶೋಧನೆಗೆ ಕೊಡುಗೆ ನೀಡಲು ಸೌದಿ ಅರೆಬಿಯಾ ಉದ್ದೇಶಿಸಿದೆ  ಎಂದು ಎಸ್‍ಪಿಎ ವರದಿ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News