ಪಿಎಫ್ಐ ಹರತಾಳ ಕರೆ: ಕಾಸರಗೋಡಿನಲ್ಲಿ ಮಿಶ್ರ ಪ್ರತಿಕ್ರಿಯೆ

Update: 2022-09-23 04:26 GMT

ಕಾಸರಗೋಡು, ಸೆ.23: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI)  ಮುಖಂಡರ ಮನೆ, ಕಚೇರಿ ಮೇಲೆ ಗುರುವಾರ ನಡೆದಿರುವ ಎನ್ ಐಎ ದಾಳಿ, ಮುಖಂಡರ ಬಂಧನವನ್ನು ಖಂಡಿಸಿ PFI ಕೇರಳದಲ್ಲಿ ಕರೆ ನೀಡಿರುವ ಹರತಾಳಕ್ಕೆ ಕಾಸರಗೋಡು ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬರುತ್ತಿದೆ.

ಕುಂಬಳೆಯಲ್ಲಿ ಸರಕು ಲಾರಿ ಮೇಲೆ ಇಂದು ಬೆಳಗ್ಗೆ ಕಲ್ಲೆಸೆದ ಘಟನೆ ನಡೆದಿದ್ದು, ಉಳಿದಂತೆ ಹರತಾಳ ಶಾಂತಿಯುತವಾಗಿ ನಡೆಯುತ್ತಿದೆ.

ಕಾಸರಗೋಡು ಜಿಲ್ಲೆಯಲ್ಲಿ  ಕೆಎಸ್ಸಾರ್ಟಿಸಿ ಸೇರಿದಂತೆ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಖಾಸಗಿ ವಾಹನಗಳು ಎಂದಿನಂತೆ ಸಂಚಾರ ನಡೆಸುತ್ತಿವೆ.

ಬೆಳಗ್ಗೆ ಆರರಿಂದ ಸಂಜೆ ಆರರ ತನಕ ಹರತಾಳಕ್ಕೆ PFI ಗುರುವಾರ ಕರೆ ನೀಡಿತ್ತು. ಪ್ರಮುಖ ಕೇಂದ್ರಗಳಾದ  ಹೊಸಂಗಡಿ, ಉಪ್ಪಳ, ಕಾಸರಗೋಡು ಮೊದಲಾದೆಡೆ ಪ್ರತಿ ಭಟನೆ ನಡೆಸಲಾಗುವುದು ಎಂದು ಪಿ ಎಫ್ ಐ ಮುಖಂಡರು ತಿಳಿಸಿದ್ದಾರೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ: ಬಾಲಕನ ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಯುವಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News