×
Ad

ಬಹರೈನ್ ನಲ್ಲಿ ನೂತನ ಕನ್ನಡ ಭವನ ಉದ್ಘಾಟನೆ

Update: 2022-09-23 20:08 IST

ಮಂಗಳೂರು: ಬಹರೈನ್ ನಲ್ಲಿ ಕನ್ನಡ ಸಂಘದ ವತಿಯಿಂದ ನಿರ್ಮಿಸಲ್ಪಟ್ಟ ನೂತನ ಕನ್ನಡ ಭವನವನ್ನು ಭಾರತದ ರಾಯಭಾರಿ ಪೀಯೂಷ್ ಶ್ರೀವಾಸ್ತವ ಅವರು ಉದ್ಘಾಟಿಸಿದರು. 

ಬಳಿಕ‌ ಕನ್ನಡ ಭವನದ ಸಭಾಂಗಣದ ವೇದಿಕೆಯನ್ನು ಡಾ. ಮಹೇಶ್ ಜೋಶಿ ಹಾಗೂ ಡಾ. ಮನು ಬಳಿಗಾರ್ ಉದ್ಘಾಟಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ  ನಾಡೋಜ ಡಾ. ಮಹೇಶ್ ಜೋಶಿ,  ಪೂರ್ವಾಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್, ಕರ್ನಾಟಕ ಹಿಂದುಳಿದ ಆಯೋಗದ ಅಧ್ಯಕ್ಷ  ಕೆ. ಜಯಪ್ರಕಾಶ್ ಹೆಗ್ಡೆ, ಕರ್ನಾಟಕ ಅನಿವಾಸಿ ವೇದಿಕೆಯ ಮಾಜಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ್ ಭಟ್, ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭದ ಮುಖ್ಯ ಸಂಪಾದಕರಾದ  ರವಿ ಹೆಗ್ಡೆ, ಬೆಂಗಳೂರಿನ ಉದ್ಯಮಿ ಆನಂದ್ ಭಟ್, ಬೆಂಗಳೂರಿನ ಮಾಜಿ ಕೌನ್ಸಿಲರ್ ಕೆ. ಮೋಹನ್ ದೇವ್ ಆಳ್ವಾ, ಕನ್ನಡ ಪ್ರಭ ಪುರವಣಿ ಸಂಪಾದಕರಾದ ಗಿರೀಶ್ ರಾವ್ ಹತ್ವಾರ್ (ಜೋಗಿ), ಸಂಯುಕ್ತ ಅರಬ್ ಎಮಿರೇಟ್ಸ್ ಫಾರ್ಚ್ಯೂನ್ ಗ್ರೂಪ್ ಹೋಟೆಲ್ಸ್ ನ ಅಧ್ಯಕ್ಷ  ವಕ್ವಾಡಿ ಪ್ರವೀಣ್ ಶೆಟ್ಟಿ, ಬಹರೈನ್ ನ ವಿ.ಕೆ.ಎಲ್. ಗ್ರೂಪ್ ನ ಅಧ್ಯಕ್ಷ ಡಾ. ವರ್ಗೀಸ್ ಕುರಿಯನ್ ಮೊದಲಾದವರು ಉಪಸ್ಥಿತರಿದ್ದರು.

ಸಂಘದ ವಿವಿಧ ಚಟುವಟಿಕೆಗಳ ಕೊಠಡಿಗಳನ್ನು ವಿವಿಧ ದಾನಿಗಳು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಭವನ ಕಟ್ಟಡ ಸಮಿತಿಯ ಅಧ್ಯಕ್ಷರಾದ ಆಸ್ಟಿನ್ ಸಂತೋಷ್, ಕನ್ನಡ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಕಿರಣ್ ಉಪಾಧ್ಯಾಯ ಅವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News