ಸಚಿನ್ ಪೈಲಟ್ ಗೆ ಸಿಎಂ ಹುದ್ದೆ ಸಾಧ್ಯತೆ, ಇಂದು ರಾಜಸ್ಥಾನದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ

Update: 2022-09-25 05:17 GMT
Photo:PTI

ಹೊಸದಿಲ್ಲಿ: ಅಶೋಕ್‌ ಗೆಹ್ಲೋಟ್‌ (Ashok Gehlot) ಅವರು ಕಾಂಗ್ರೆಸ್‌ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳುವ ನಿಟ್ಟಿನಲ್ಲಿ ಸಚಿನ್‌ ಪೈಲಟ್‌ ಗೆ (Sachin Pilot)ಮುಖ್ಯಮಂತ್ರಿಯಾಗುವ ಹಾದಿ ಸುಗಮಗೊಳಿಸಬಹುದು  ಎಂಬ ಗುಸುಗುಸು ನಡುವೆಯೇ ರವಿವಾರ ಸಂಜೆ ಜೈಪುರದಲ್ಲಿ ರಾಜಸ್ಥಾನದ ಶಾಸಕರ ಸಭೆಯನ್ನು ಕಾಂಗ್ರೆಸ್‌ ಕರೆದಿದೆ.

ದಿಲ್ಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ವೀಕ್ಷಕರನ್ನಾಗಿ ನೇಮಿಸಿದ್ದು, ರಾಜ್ಯ ಉಸ್ತುವಾರಿ ಅಜಯ್ ಮಾಕನ್ ಕೂಡ  ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಶೋಕ್ ಗೆಹ್ಲೋಟ್ ಅವರು ಮುಂದಿನ ತಿಂಗಳು ನಡೆಯಲಿರುವ ಅಧ್ಯಕ್ಷ ಚುನಾವಣೆಯಲ್ಲಿ ಮುಂಚೂಣಿಯಲ್ಲಿದ್ದು, ಎರಡು ದಶಕಗಳಲ್ಲಿ ಮೊದಲ ಗಾಂಧಿಯೇತರ ಕಾಂಗ್ರೆಸ್ ಮುಖ್ಯಸ್ಥರಾಗುವ ವಿಶ್ವಾಸದಲ್ಲಿದ್ದಾರೆ.

ರಾಜಸ್ಥಾನದ ಮೇಲಿನ ಹಿಡಿತವನ್ನು ಕಳೆದುಕೊಳ್ಳಲು ಸಿದ್ಧರಿಲ್ಲದ ಗೆಹ್ಲೋಟ್ ಈ ವಾರದ ಆರಂಭದಲ್ಲಿ ಶಕ್ತಿ ಪ್ರದರ್ಶನವಾಗಿ ಶಾಸಕರ ಸಭೆಯನ್ನು ಕೂಡ ಕರೆದಿದ್ದರು. ಆದರೆ ರಾಹುಲ್ ಗಾಂಧಿಯವರ ಸ್ಪಷ್ಟ ಸಂದೇಶದ ನಂತರ ಗೆಹ್ಲೋಟ್ ಅವರು  ಅಂತಿಮವಾಗಿ 'ಒಬ್ಬ ವ್ಯಕ್ತಿ, ಒಂದು ಹುದ್ದೆ'ಎಂಬ  ಪಕ್ಷದ ನಿಯಮಕ್ಕೆ ಮಣಿದಿದ್ದಾರೆ.

ಇದರರ್ಥ 2020 ರಲ್ಲಿ ಬಂಡಾಯ ಎದ್ದ ನಂತರ ಉಪಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಿರುವ ಸಚಿನ್ ಪೈಲಟ್ ಈಗ ಅವರು ಬಯಸಿದ ಭಡ್ತಿಯನ್ನು ಪಡೆಯಬಹುದು. ಗೆಹ್ಲೋಟ್ ಕನಿಷ್ಠ ಪಕ್ಷ ನಿಷ್ಠಾವಂತರನ್ನು ಸಿಎಂ  ಆಗಿಸಲು ಬಯಸಿದ್ದರು. ಆದರೆ ಅದು ಅಸಂಭವವೆಂದು ಕಾಣುತ್ತಿದೆ.

2024 ರ ಲೋಕಸಭೆ ಸ್ಪರ್ಧೆಗೆ ಕೇವಲ ಆರು ತಿಂಗಳ ಮುಂಚಿತವಾಗಿ ಮುಂದಿನ ವರ್ಷದ ಕೊನೆಯಲ್ಲಿ ರಾಜಸ್ಥಾನ ಚುನಾವಣೆ ನಡೆಯಲಿದೆ. ರಾಜಸ್ಥಾನವು ಕಾಂಗ್ರೆಸ್ ಅಧಿಕಾರದಲ್ಲಿರುವ  ಎರಡು ರಾಜ್ಯಗಳಲ್ಲಿ ಒಂದಾಗಿದೆ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸ್ವಂತಬಲದಲ್ಲಿ ಅಧಿಕಾರದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News